• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ದೇವಸ್ಥಾನ ಹಾಗೂ ಮನೆ ಕಳ್ಳತನ ಮಾಡಿದ ಅಂತರಜಿಲ್ಲಾ ಆರೋಪಿತರ ಬಂಧನ

August 10, 2021 by Sachin Hegde Leave a Comment

ನಾಲ್ಕು ಪ್ರಕರಣಗಳ ಪತ್ತೆ : ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರದ ಆಭರಣ ವಶ; 


ಉತ್ತರ-ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಗೋಟಗೋಡಿಕೊಪ್ಪ ಕ್ರಾಸ್ ಹತ್ತಿರ ಮುಂಡಗೋಡ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಆದ ಸುಲಿಗೆ ಪ್ರಕರಣ, ಬೆಡಸಗಾಂವ ಹಾಗೂ ಕಲಕೊಪ್ಪ ಗ್ರಾಮದಲ್ಲಾದ ಮನೆಕಳ್ಳತನ ಮತ್ತು ಕೊಪ್ಪ ಗ್ರಾಮದ ಪಾಂಡುರಂಗ ದೇವಸ್ಥಾನವನ್ನು ಕಳ್ಳತನ ಮಾಡಿದ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಮೇಲಿಂದ ಮೇಲೆ ಆದ ಕಳ್ಳತನ ಹಾಗೂ ಸುಲಿಗೆ ಮಾಡಿದ ಆರೋಪಿತರನ್ನು ಪತ್ತೆ ಹಚ್ಚುವದು ಪೊಲೀಸ್ ಇಲಾಖೆಗೆ ಒಂದು ಸವಾಲಾಗಿತ್ತು.


       ಈ ಪ್ರಕರಣಗಳನ್ನು ಭೇದಿಸಲು ಶ್ರೀ ಪ್ರಭುಗೌಡ ಡಿ.ಕೆ ಪೊಲೀಸ್ ನಿರೀಕ್ಷಕರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಮುಂಡಗೋಡ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಕಳ್ಳತನ ಮಾಡಿರುವ ಆರೋಪಿತರ ಪತ್ತೆ ಕಾರ್ಯ ಕೈಗೊಂಡು

ಆರೋಪಿತರಾದ….

01].ಅಬ್ದುಲ್ ಸತ್ತಾರ @ ಮಲ್ಲಿಕ ತಂದೆ ಮೆಹಬೂಬ ಷರೀಪ್ ಶೇಖ್ ಪ್ರಾಯ-24 ವರ್ಷ ಸಾ||ಶೃಂಗೇರಿ ತಾ||ಹಾನಗಲ್ ಜಿ||ಹಾವೇರಿ 
02].ಶ್ರೀಧರ @ ಸಿರಿ ತಂದೆ ಯಲ್ಲಪ್ಪ ಬಂಡಿವಡ್ಡರ ಪ್ರಾಯ-22 ವರ್ಷ ಸಾ||ಶೃಂಗೇರಿ ತಾ||ಹಾನಗಲ್ ಜಿ||ಹಾವೇರಿ
        ಇವರನ್ನು ಬಂಧಿಸಿ, ಆರೋಪಿತರರಿಂದ  ರೂ. 01 ಲಕ್ಷಕ್ಕೂ ಅಧಿಕ ಮೌಲ್ಯದ 30 ಗ್ರಾಂ ಬಂಗಾರದ ಆಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಕಳ್ಳತನದಲ್ಲಿ ಭಾಗಿಯಾಗಿರುವ 3ನೇ ಅರೋಪಿತನು ತಲೆಮರೆಸಿಕೊಂಡಿದ್ದು, ಆತನ ಪತ್ತೆಯ ಕುರಿತು ಪತ್ತೆ ಕಾರ್ಯ ಮುಂದುವರೆದಿರುತ್ತದೆ. 


         ಈ ಪ್ರಕರಣಗಳನ್ನು ಭೇದಿಸಲು  ಶಿರಸಿ ಪೊಲಿಸ್ ಉಪಾಧೀಕ್ಷಕರಾದ ಶ್ರೀ ರವಿ ನಾಯ್ಕ ರವರ ಮಾರ್ಗದರ್ಶನದಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ. ಪ್ರಭುಗೌಡ ಡಿ.ಕೆ., ಪಿಎಸ್ಐ ಶ್ರೀ ಬಸವರಾಜ ಮಬನೂರ, ಪಿ.ಎಸ್.ಐ ಶ್ರೀ ನಿಂಗಪ್ಪ ಜಕ್ಕಣ್ಣವರ ಹಾಗೂ ಪೊಲೀಸ್ ಸಿಬ್ಬಂದಿಯವರಾದ ಧರ್ಮರಾಜ, ಗಣಪತಿ, ವಿನಾಯಕ, ತಿರುಪತಿ, ವಿನೋದಕುಮಾರ, ಅರುಣಕುಮಾರ, ಅಣ್ಣಪ್ಪ ಹಾಗೂ ಶರತಕುಮಾರ ರವರು ಭಾಗವಹಿಸಿ, ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.  ಮುಂಡಗೋಡ ಪೊಲೀಸ್ ರವರ ಈ ಪತ್ತೆ ಕಾರ್ಯವನ್ನು ಈ ಮೂಲಕ ಪ್ರಶಂಸಿಲಾಗಿದೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Crime, Mundgod Tagged With: ಪ್ರಕರಣಗಳನ್ನು ಭೇದಿಸಲು, ಬಂಗಾರದ ಆಭರಣ, ಲಕ್ಷಕ್ಕೂ ಅಧಿಕ ಮೌಲ್ಯದ 30 ಗ್ರಾಂ, ಶಿರಸಿ ಪೊಲಿಸ್ ಉಪಾಧೀಕ್ಷಕರಾದ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,116 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar