ಕಾರವಾರ : ಜಿಲ್ಲಾ ನಿರ್ಮಿತಿ ಕೇಂದ್ರದ ಕಚೇರಿಯಲ್ಲಿ ಕಾರ್ಯ ವಿರ್ವಹಿಸಲು ಇಬ್ಬರು ಎಂಜಿನಿಯರರು ಹಾಗೂ ಓರ್ವ ಸಹಾಯಕ ಲೆಕ್ಕಿಗ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಎರಡು ವರ್ಷ ಅವಧಿಗೆ ಸಿವಿಲ್ ಇಂಜಿನಿಯರಿAಗ್ ವಿಭಾಗದಲ್ಲಿ ಕೆಲಸ ಮಾಡಲು ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ 40 ವರ್ಷದೊಳಗಿನವರ ಅರ್ಜಿ ಸಲ್ಲಿಸಬಹುದಾಗಿದ್ದು. ತಿಂಗಳಿಗೆ 18 ಸಾವಿರ ವೇತನವಿರುತ್ತದೆ.
ಒಂದು ವರ್ಷ ಅವಧಿಗೆ ಸಹಾಯಕ ಲೆಕ್ಕಿಗ ಹುದ್ದೆಗೆ ಕಾರ್ಯ ವಿರ್ವಗಿಸಲು ಬಿ.ಕಾಂ ಮತ್ತು ಟ್ಯಾಲಿಯಲ್ಲಿ ಅನುಭವಿರುವ 40 ವರ್ಷದೊಳಗಿನ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಸ್ಥಳೀಯರಿಗೆ ಪ್ರಥಮ ಆದ್ಯತೆ ಇದ್ದು. ತಿಂಗಳಿಗೆ 12,500 ರೂ. ವೇತನವಿರುತ್ತದೆ.
ಅಗಷ್ಟ 16 ರೊಳಗೆ ಯೊಜನಾ ವ್ಯವಸ್ಥಾಪಕರು, ಜಿಲ್ಲಾ ನಿರ್ಮಿತಿ ಕೇಂದ್ರ ಸಬ್ ರಜಿಸ್ಟರ್ ಕಚೇರಿ ಹಿಂದುಗಡೆ, ಈಜುಕೊಳ ಪಕ್ಕದಲ್ಲಿ ಕಾರವಾರ – 581 301 ಕಚೇರಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಬಯೋಡಾಟಾ ಪ್ರತಿಯೊಂದಿಗೆ ಜನನ ಪ್ರಮಾಣ ಪತ್ರ. ವಿದ್ಯಾಬ್ಯಾಸಕ್ಕೆ ಸಂಬಧಪಟ್ಟ ಪ್ರಮಾಣ ಪತ್ರ, ಅನುಭವ ಪ್ರಮಾಣ ಪತ್ರಗಳೊಂದಿಗೆ ಒಂದು ಭಾವಚಿತ್ರವನ್ನು ಲಗತ್ತಿಸಬೇಕು. ಅಭ್ಯರ್ಥಿಯನ್ನು ಆಯ್ಕೆ ಸಮಿತಿಯು ನಡೆಸಲು ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಪಟ್ಟಿಯನ್ನು ಘೋಷಿಸಲಾಗುವುದು.
ಒಂದು ವರ್ಷಕ್ಕೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿತ್ತಿದ್ದು, ಗುತ್ತಿಗೆ ಅವಧಿಯಯಲ್ಲಿ ಕೆಲಸ ತೃಪ್ತಿ ನೀಡಿದಲ್ಲಿ ಆದ್ಯತೆಯ ಮೇರೆಗೆ ಅಗತ್ಯವಿದ್ದಲ್ಲಿ ಮುಂದಿನ ವರ್ಷಕ್ಕೆ ವಿಸ್ತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಯೋಜನಾ ವ್ಯವಸ್ಥಾಪಕರ ಕಚೇರಿಯ ದೂರವಾಣಿ ಸಂಖ್ಯೆ : 08382-223184 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Leave a Comment