ಉಡಪಿ : ಹವ್ಯಾಸಿ ಖಗೋಳ ತಜ್ಞರಿಗೆ ಹಾಗೂ ಖಗೋಳಾಸಕ್ತರಿಗೆ ಆಗಷ್ಟ ತಿಂಗಳ ವರದಾನವಂತಿದೆ. ಏಕೆದಂರೆ ಈ ತಿಂಗಳನಲ್ಲೀಯೇ ನಮ್ಮ ಸೌರಮಂಡಲದ ಎರಡು ಅತೀ ದೂಡ್ಡ ಗ್ರಹಗಳು ವಿಯುತಿಯನ್ನು ತಲುಪುತ್ತೆವೆ ಹಾಗೂ ವರ್ಷದ ಅತ್ಯುತ್ತಮ ಉಲ್ಕಾವೃಷ್ಟಿ ಎನಿಸಿಕೊಳ್ಳವ ಪರ್ಸೀಡ್ ಉಲ್ಕಾವೃಷ್ಟಿಯೂ ಇದೇ ತಿಂಗಳಲ್ಲಿ ಗೋಚರಿಸುತ್ತದೆ.
೧೯೯೨ ರಲ್ಲಿ ಸ್ವಿಫ್ಟ್ -ಟಟ್ಟಲ್ ಧೂಮಕೇತು ಸೂರ್ಯನನ್ನು ಸಮೀಪಿಸಿದಾಗ, ಚಲಿಸಿದ ಪಥದಲ್ಲಿ ಧೂಮಕೇತುವಿನ ಅವಶೇಷಗಳು ಉಳಿದುಕೊಂಡಿದ್ದು. ಭೂಮಿಯ ಸೂರ್ಯನ ಸುತ್ತ ಸುತ್ತುವಾಗ ಈ ಅವಶೇಷಗಳು ಭೂಮಿಯ ಚಲನೆಗೆ ಎದುರಾದಾಗ ಅವು ಭೂಮಿಯ ವಾತಾವರಣವನ್ನು ತಲುಪುತ್ತದೆ.

ಇದು ನಮಗೆ ಬೆಳಕಿನ ರೇಖೆಯ ಹಾದು ಹೋದಂತೆ ಕಾಣುತ್ತದೆ. ಇದನ್ನು ನಾವು ಉಲ್ಕಪಾತ ಎಂದು ಕರೆಯುತ್ತೇವೆ ಯಾವಾಗ ಕಡಿಮೆ ಸಮಯದಲ್ಲಿ ಹೆಚ್ಚು ಉಲ್ಕೆಗಳು ಕಾಣಿಸಿಕೊಳ್ಳುತ್ತದೆಯೋ ಆಗ ಇದನ್ನು ನಾವು ಉಲ್ಕಾವೃಷ್ಟಿ ಅಥವಾ ಉಲ್ಕಪಾತ ಎಂದು ಕರೆಯುತ್ತೆವೆ. ಪರ್ಸೀಡ್ ಉಲ್ಕವೃಷ್ಟಿಯಲ್ಲಿ ಶುಭ್ರ ಆಕಾಶದಲ್ಲಿ ಗಂಟೆಗೆ ಗರಿಷ್ಟ ೧೫೦ ಉಲ್ಕೆಗಳನ್ನು ಕಾಣಹುದು. ಆದರೆ ಈ ವಷರ್ ಗಂಟೆಗೆ ಸುಮಾರು ೬೦ ಉಲ್ಕೆಗಳನ್ನು ನಾವು ವೀಕ್ಷಿಸಬಹುದಾಗಿದೆ.
ಒಂದು ನಿರ್ದಿಷ್ಟ ಬಿಂದುನಿAದ ಈ ಉಲ್ಕೆಗಳು ಬರುವಂತೆ ಕಾಣುವುದಿಲ್ಲ. ಬದಲಾಗಿ ರಾತ್ರಿ ಆಕಾಶದಾದ್ಯಂತ ಗೋಚರಿಸುತ್ತದೆ. ಮಧ್ಯ ರಾತ್ರಿಯ ನಂತರ ಪಾರ್ಥ ನಕ್ಷತ್ರ ಪುಂಜವು. ಈಶಾನ್ಯ ದಿಕ್ಕಿನಲ್ಲಿ ಗೋಚರಿಸುವುದರಿಂದ ಈ ಉಲ್ಕಾವೃಷ್ಟಿಯನ್ನು ವೀಕ್ಷಸಲು ಈ ಸಮಯ ಅತೀ ಉತ್ತಮವಾಗಿರುತ್ತದೆ. ಈ ಎಲ್ಲ ಉಲ್ಕೆಗಳು ಪಾರ್ಥ ನಕ್ಷತ್ರಪುಂಜದಿAದ ಉದಯಿಸಿದಂತೆ ಗೋಚರಿಸುತ್ತವೆ.
ಈಶಾನ್ಯ ದಿಕ್ಕಿನಲ್ಲಿ ಪ್ರಕಾಶಮಾನ ನಕ್ಷತ್ರವಾದ ಬ್ರಹ್ಮಹೃದಯವು ಮುಂಜಾನೆ ಸುಮಾರು ೨ ಗಂಟೆಯ ಹೊತ್ತಿಗೆ ಉದಯಿಸುತ್ತದೆ. ಅದರ ಮೇಲ್ಭಾಗದಲ್ಲಿ ಪಾರ್ಥ ನಕ್ಷತ್ರಪುಂಜವಿರುವುದರಿAದ ಈ ಸಮಯವು ಪಾರ್ಥನಕ್ಷತ್ರ ಪುಂಜವನ್ನು ಗುರುತಿಸಲು ಅತೀ ಸೂಕ್ತ ವೇಳೆಯಾಗಿದೆ.
ಆ.೧೨ ರಂದು ಪಾರ್ಥ ನಕ್ಷತ್ರಪುಂಜವು ಬೆಳಗಿನ ಜಾವ ಆಕಾಶದ ಎತ್ತರಕ್ಕೆ ತಲುಪುದರಿಂದ ಬೇಗನೆ ಎದ್ದು ಈ ಉಲ್ಕಾವೃಷ್ಟಿಯನ್ನು ನೋಡಿ ಸಂಭ್ರಮಿ ಸಬಹುದಾಗಿದೆ. ಪಾರ್ಥನಕ್ಷತ್ರ ಪುಂಜವನ್ನು ಗುರುತಿಸಲು ಇನ್ನೊಂದು ಮಾರ್ಗ ವಿದೆ. ಉತ್ತರ ದಿಕ್ಕಿನಲ್ಲಿ ಕುಂತಿ ನಕ್ಷತ್ರಪುಂಜದ ೫ ನಕ್ಷತ್ರಗಳಿಂದಾದ ಆಂಗ್ಲ ಭಾಷೆಯ ಥಿ ಆಕಾರ ಹಾಗೂ ಪೂರ್ವ ಆಕಾಶದಲ್ಲಿ ಗೋಚರಿಸುವ ಕೆಂಪು ನಕ್ಷತ್ರವನ್ನು ಹೊಂದಿರುವ ವೃಷಭ ರಾಶಿಯಿಂದ ರೂಪುಗೊಂಡ ಆಕಾರದ ಮಧ್ಯದಲ್ಲಿ ಪಾರ್ಥ ನಕ್ಷತ್ರಪುಂಜವನ್ನು ಗುರುತಿಸಬಹುದು.
ಈ ತಿಂಗಳಿನ ೨ನೇ ತಾರೀಕು ಶನಿಗ್ರಹವು ವಿಯುತಿಯನ್ನು ತಲುಪಿದ್ದು. ೨೦ನೇ ತಾರಿಕಿನಂದು ಗುರುಗ್ರಹವು ವಿಯುತಿಯನ್ನು ತಲುಪುತ್ತದೆ. ಗ್ರಹದ ವಿಯುತಿವೆಂದರೆ ಗ್ರಹವು ಸೂರ್ಯನ ನೇರೆ ವಿರುದ್ಧ ದಿಕ್ಕಿನಲ್ಲಿ ಇರುತ್ತದೆ. ಗ್ರಹದ ವಿಯುತಿಯ ಸಮಯದಲ್ಲಿ. ಸೂರ್ಯ ಭೂಮಿ ಹಾಗೂ ಗ್ರಹಗಳು ಸರಿ ಸುಮಾರು ಒಂದೇ ರೇಖೆಯಲ್ಲಿ ಇರುವುದರಿಂದ ಹುಣ್ಣಿಮೆಯ ಚಂದ್ರನAತೆ ಗ್ರಹವು ಸಂಪೂರ್ಣವಾಗಿ ಬೆಳೆಗುತ್ತದೆ. ರಾತ್ರಿಯ ವೇಳೆ ಭೂಮಿಯ ಭಾಗಗಳಿಗೆ ಗ್ರಹಗಳು ಸೂರ್ಯನ ನೇರೆ ವಿರುದ್ಧ ದಿಕ್ಕಿನಲ್ಲಿರುವುದರಿಂದ. ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಈ ಗ್ರಹಗಳು ಗೋಚರಿಸುತ್ತವೆ.
ಶನಿ ಗ್ರಹವು ವಿಯುತಿಯನ್ನು ತಲುಪಿದ್ದು. ಗುರು ಗ್ರಹವು ಇದೇ ತಿಂಗಳ ವಿಯುತಿಯನ್ನು ತಲುಪಲಿರುವುದರಿಂದ ಈ ತಿಂಗಳ ಸೂರ್ಯಾಸ್ತವಾದ ಸ್ವಲ್ಪ ಸಮಯದಲ್ಲೇ ಇವೆರಡು ಗ್ರಹಗಳು ಪ್ರಕಾಶಮಾನವಾಗಿರುವ ಹಾಗೂ ಭೂಮಿಗೆ ಹತ್ತಿರದಲ್ಲಿ ಗೋಚರಿಸುತ್ತದೆ. ಮತ್ತು ಮಧ್ಯರಾತ್ರಿ ಆಕಾಶದಲ್ಲಿ ಎತ್ತರದ ಸ್ಥಾನಕ್ಕೆ ತಲುಪಿ ನಂತರ ಸೂರ್ಯ ಪೂರ್ವದಲ್ಲಿ ಉದಯಿಸಿದಂತೆ ಇವೆರಡು ಗ್ರಹಗಳು ಪಶ್ಚಿಮದಲ್ಲಿ ಮುಳುಗುತ್ತವೆ.
ಕರಾವಳಿ ಎಲ್ಲಾ ಖಗೋಳಾಸಕ್ತರು ಪರ್ಸೀಡ್ ಉಲ್ಕಾವೃಷ್ಟಿಯನ್ನು ಹಾಗೂ ಎರಡು ಗ್ರಹಗಳ ವಿಯುತಿಯನ್ನು ಈ ತಿಂಗಳಲ್ಲಿ ನೋಡಿ ಆನಂದಿಸುವAತಾಗಲಿ ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಹೇಳಿಕೆಯಲ್ಲಿ ತಿಳಿಸಿದೆ.
Leave a Comment