ನವದೆಹಲಿ : ರಾಜಕೀಯವನ್ನು ಅಪರಾಧ ಮುಕ್ತಗೊಳಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ನಿರ್ದೇಶನ ಹೊರಡಿಸಿದ್ದು, ಚುನಾವಣೆ ಘೋಷಣೆಯಾದ ಬಳಕೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಮೇಲೆ ಯಾವುದಾದರೂ ಕ್ರಿಮಿನಲ್ ಪ್ರಕರಣಗಳಿದ್ದರೆ ಅದನ್ನು ಆ ಅಭ್ಯರ್ಥಿಯ ಆಯ್ಕೆಯಾದ 48 ಗಂಟೆಯೊಳಗೆ ಪ್ರಕಟಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನೀರ್ದೇಶನ ಹೊರಡಿಸಿದೆ.
ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಇದೇ ಇಚಾರದಲ್ಲಿ ಇದೇ ರೀತಿಯ ತೀರ್ಪು ನೀಡಿತ್ತು. ರಾಜಕೀಯ ಪಕ್ಷಗಳು ಅಭ್ಯರ್ಥಿಮೇಲೆ ಕ್ರಿಮಿನಲ್ ಪ್ರಕರಣ ಇದ್ದರೆ ಅದರ ಮಾಹಿತಿಯನ್ನು 48 ಗಂಟೆಯೊಳಗೆ ಪ್ರಕಟಿಸಬೇಕು. ಅಥವಾ ನಾಮಪತ್ರ ಸಲ್ಲಿಕೆಯ ದಿನಕ್ಕೆ 2 ವಾರ ಮುಂಚಿತವಾಗಿ ಪ್ರಕಟಿಸಬೇಕು ಎಂದು ತನ್ನ ತೀರ್ಪಿನ 4.4 ಪ್ಯಾರಾಗ್ರಾಫ್ನಲ್ಲಿ ನ್ಯಾಯಪೀಠ ತಿಳಿಸಿತ್ತು. ಇದೀಗ ಎರಡನೇ ಅಂಶವನ್ನು ಕೈ ಬಿಡಲಾಗಿದ್ದು.
ಎರಡು ದಿನದೊಳಗೆ ಅಭ್ಯರ್ಥಿಯ ಕ್ರಿಮಿನಲ್ ಮಾಹಿತಿಯನ್ನು ಪ್ರಕಟಿಸಬೇಕು ಎಂದು ತಿಳಿಸಿದೆ. ರಾಜಕೀಯ ಪಕ್ಷಗಳು ಒಂದು ವೇಳೆ ಅಪರಾಧ ಹಿನ್ನಲೆ ಇರುವ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದರೆ ಅದಕ್ಕೆ ಕಾರಣ ನೀಡಬೇಕು ಇಂಥ ಅಭ್ಯರ್ಥಿಯ ಕ್ರಿಮಿನಲ್ ಪ್ರಕರಣ ಮಾಹಿತಿ ಹಾಗೂ ಅವರನ್ನು ಯಾಕೆ ಆರಿಸಲಾಯಿತು ಎಂಬ ಸಕಾರಣ ವಿವರವನ್ನ ಪಕ್ಷದ ವೆಬ್ ಸೈಟ್ಗಳಲ್ಲಿ ಪ್ರಕಟಿಸಬೇಕು ಎಂದು ಆದೇಶಿಸಿದೆ.
Leave a Comment