ಮುಂಬೈ: 15 ವರ್ಷದ ಬಾಲಕಿಯೋರ್ವಳು ಕರಾಟೆ ಬೆಲ್ಟ್ನಿಂದ ಹೆತ್ತ ತಾಯಿಯ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆಮಾಡಿರುವ ಘಟನೆ ಥಾಣೆಯಲ್ಲಿ ಪೆÇಲೀಸ್ ತನಿಖೆಯಿಂದ ಬೆಳಕಿಗೆಬಂದಿದೆ.
ತಾಯಿಗೆ ತನ್ನ ಮಗಳು ವೈದ್ಯಕೀಯ ಶಿಕ್ಷಣ ಅಭ್ಯಾಸ ಮಾಡಲಿ ಎಂದುಆಸೆ. ಆದರೆ ಅದು ಮಗಳಿಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಅಮ್ಮ�ಮಗಳ ನಡುವೆ ಜಗಳ ಆಗುತ್ತಿತ್ತು. ಇದೇ ವಿಚಾರಕ್ಕೆ ಅಮ್ಮನ ವಿರುದ್ಧಪೆÇಲೀಸರು ಅವರಿಬ್ಬರಿಗೂ ಬುದ್ಧಿ ಹೇಳಿ ಕಳುಹಿಸಿದ್ದರು.ನಂತರ ಜುಲೈ 30ರಂದು ಇದೇ ಬಾಲಕಿ, ‘ತನ್ನ ತಾಯಿಮೇಲಿಂದ ಬಿದ್ದು ಸತ್ತು ಹೋಗಿದ್ದಾರೆ’ ಎಂದು ಪೆÇಲೀಸರಿಗೆ ತಿಳಿಸಿದ್ದಳು.
ಜು.30ರಂದು ಪೆÇಲೀಸ್ ಠಾಣೆಗೆ ಕರೆ ಮಾಡಿದ್ದ ಬಾಲಕಿ, ನನ್ನ ತಾಯಿಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ ಎಂದು ಹೇಳಿದ್ದಳು. ನಂತರತಾಯಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿತ್ತು.ಶವದ ಮರಣೋತ್ತರ ಪರೀಕ್ಷೆ ವೇಳೆ ಮಹಿಳೆ ಸಹಜವಾಗಿ ಸತ್ತಿಲ್ಲ.ಕತ್ತು ಹಿಸುಕಿ ಕೊಲ್ಲಲಾಗಿದೆ ಎಂಬ ವಿಚಾರ ಬೆಳಕಿಗೆ ಬಂತು. ಕೂಡಲೇಬಾಲಕಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬೆಳಕಿಗೆಬಂತು.
ಆಕೆ ತಾನು ತನ್ನ ತಾಯಿಯನ್ನು ಕರಾಟೆ ಬೆಲ್ಟ್ ನಿಂದ ಕತ್ತುಹಿಸುಕಿ ಕೊಂದಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಸದ್ಯ ಬಾಲಕಿಯನ್ನುಪೆÇಲೀಸರು ವಶಕ್ಕೆ ಪಡೆದಿದ್ದಾರೆ.ಬಾಲಕಿಯನ್ನು ಸೋಮವಾರ ಐಪಿಸಿ ಸೆಕ್ಷನ್ 302ರ ಪ್ರಕಾರಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ.
Leave a Comment