ಶಿರಸಿ : ಮನೆಯಲ್ಲಿ ಅಕ್ರಮವಾಗಿ ಜಿಂಕೆಯನ್ನ ಸಾಕಿಕೊಂಡಿದ್ದ ಆರೋಪಿಯನ್ನು ದಾಂಡೇಲಿ ಸಂಚಾರಿ ಅರಣ್ಯ ಪೊಲೀಸ್ ಘಟಕದವರ ಬಂಧಿಸಿದ ಘಡನೆ ತಾಲೂಕಿನ ಕಲಕೊಪ್ಪದಲ್ಲಿ ನಡೆದಿದೆ.

ಗ್ರಾಮದ ಹಬೀಬ ರೆಹಮಾನ್ ಮಹಮ್ಮದ ಸಾಬ್ ಬಂಧಿತ ಆರೋಪಿಯಾಗಿದ್ದು. ಆರೋಪಿಯಿಂದ ಜಿಂಕೆಯನ್ನ ಪೋಲೀಸರು ವಶಕ್ಕೆ ಪಡೆದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಆರೋಪಿತ ವ್ಯಕ್ತಿ ಕಳೆದ ಆರು ತಿಂಗಳಿನಿAದ ಜಿಂಕೆಯನ್ನ ಮನೆಯಲ್ಲಿ ಇಟ್ಟುಕೊಂಡು ಸಾಕುತ್ತಿದ್ದು. ಈ ಬಗ್ಗೆ ಸಂಚಾರಿ ಅರಣ್ಯ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.

ಪಿಎಸ್ಐ ಮಂಜುನಾಥ ಬೋರ್ಕರ್ ಹಾಗೂ ಸಿಬ್ಬಂದಿಗಳು ಈ ಸಂಭAದ ದಾಳಿ ನಡೆಸಿ ಆರೋಪಿಯನ್ನ ಬಂಧಿಸಿ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇನ್ನು ಬಂಧಿತ ಆರೋಪಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
Leave a Comment