ವಿದ್ಯಾರ್ಥಿಗಳಿಂದ ಹೆಚ್ಚಿನ ಹಣ ಪಡೆದು ಪ್ರತಿಷ್ಠಿತ ವಿವಿಗಳ ನಕಲಿ ಪದವಿ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದ ಪಂಜಾಬ್ ಮೂಲದ ದಂಪತಿಯನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ. ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಎಜುಕೇಷನಲ್ ಟ್ರಸ್ಟ್ ಎಂಬ ಕಚೇರಿ ತೆರೆದು ಪಿಯುಸಿ ಉತ್ತೀರ್ಣ ಅಥವಾ ಅನುತ್ತೀರ್ಣವಾದ ವಿದ್ಯಾರ್ಥಿಗಳಿಂದ ಹೆಚ್ಚಿನ ಹಣ ಪಡೆದು ಪದವಿ ಪ್ರಮಾಣ ಪತ್ರ ನೀಡುತ್ತಿದ್ದರು.
ರಾಜ್ಯ ಮತ್ತು ಹೊರರಾಜ್ಯದ ಪ್ರತಿಷ್ಠಿತ ವಿವಿಗಳಿಂದ ಪರೀಕ್ಷೆ ಬರೆಯದೆ ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಅಂತಿಮ ವರ್ಷದ ಬಿಟೆಕ್, ಎಂಟೆಕ್, ಎಂಬಿಎ ಬಿಕಾಂ ಹಾಗೂ ಇತರೆ ಪದವಿ ಪ್ರಮಾಣಪತ್ರಗಳನ್ನು ಈ ಆರೋಪಿ ದಂಪತಿ ನೀಡುತ್ತಿದ್ದರು. ಈ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ದೊರಕಿದೆ.

ತಕ್ಷಣ ಸಿಸಿಬಿ ಅಧಿಕಾರಿಗಳು ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು ಎಕಕಾಲದಲ್ಲಿ ಆರೋಪಿತರ ಕಚೇರಿ ಮತ್ತು ಮನೆ ಸೇರಿದಂತೆ ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಅಂಕಪಟ್ಟಿ, ಪದವಿ ಪ್ರಮಾಣಪತ್ರ, ಸ್ಥಿರಾಸ್ತಿಗಳಿಗೆ ಸಂಬAಧಿತ ದಾಖಲೆಗಳು ಹಾಗೂ ಇತರೆ ವಸ್ತುಗಳು ವಶಕ್ಕೆ ಪಡೆದುಕೊಂಡು ದಂಪತಿಯನ್ನು ಬಂಧಿಸಿದ್ದಾರೆ.
ಬAಧಿತ ದಂಪತಿ ಹಲವು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ನೆಲೆಸಿದ್ದು, ನಗರದ ಹೊರವಲಯದಲ್ಲಿ ಐಟಿಐ ಟ್ರö್ಯನಿಂಗ್ ಸಂಸ್ಥೆಯೊAದನ್ನು ನಡೆಸುತ್ತಿದ್ದರು. ಎಜುಕೇಷನ್ ಟ್ರಸ್ಟ್ ಹೆರಿನಲ್ಲಿ ಈ ಅಕ್ರಮ ನಡೆಸುತ್ತಿರುವುದು ತಿಳಿದುಬಂದಿದೆ.
Leave a Comment