ನವದೆಹಲಿ : ಪರಿಸರ ಮಾಲಿನ್ಯಕ್ಕೆ ಕಾರಣವಾಗುವ 15 ವರ್ಷಕ್ಕಿಂತ ಹಳೆಯ ಸರ್ಕಾರಿ ವಾಹನಗಳನ್ನು ಸಂಚಾರದಿAದ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮೋಟಾರು ವಾಹನ ಗುಜರಿ ನೀತಿಗೆ ಚಾಲನೆ ನೀಡಿದ್ದಾರೆ. ಇದರಿಂದ ದೇಶದಲ್ಲಿ ಹೊಗೆಯುಗುಳದ ವಿದ್ಯತ್ ಚಾಲಿತ ವಾಹನಗಳ ಇನ್ನು ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಯಿದೆ. ಈ ನೀತಿಯಂತೆ 15 ವರ್ಷ ತುಂಬಿದ ಸರ್ಕಾದ ನಾಲ್ಕು ಚಕ್ರದ ವಾಹನಗಳು ಕಡ್ಡಾಯವಾಗಿ ಗುಜರಿಗೆ ಹೋಗಬೇಕು. 20 ವರ್ಷ ದಾಟಿದ ಖಾಸಗಿ ಮತ್ತು 15 ವರ್ಷ ದಾಟಿದ ವಾಣಿಜ್ಯ ವಾಹನಗಳನ್ನ ಅರ್ಹತಾ ಪರೀಕ್ಷೆಯೆ ಪ್ರಮಾಣಪತ್ರ ಇಲ್ಲದಿದ್ದರೆ. ಅವುಗಳ ನೋಂದಣಿ ತನ್ನಿಂತಾನೇ ರದ್ದಾಗುತ್ತದೆ. ಹಳೆಯ ವಾಹನಗಳನ್ನು ಗುಜರಿಗೆ ಕಳುಹಿಸುವ ಗ್ರಾಹಕರಿಗೆ ನೋಂದಣಿ ಶುಲ್ಕ ಮತ್ತು ರಸ್ತೆ ತೆರಿಗೆ ವಿನಾಯ್ತಿ ಸೇರಿದಂತೆ ಹಲವು ಅನುಕೂಲಗಳು ದೊರೆಯಲಿವೆ.

ಗುಜರಾತ್ ಹೂಡಿಕೆದಾರರ ಸಮಾವೇಶದಲ್ಲಿ ಹೊಸ ನೀತಿಯನ್ನು ಉದ್ಘಟಿಸಿದ ಪ್ರಧಾನಿ, ಮಾಲಿನ್ಯ ನಿಯಂತ್ರಣ ಮತ್ತು ಪರಿಸರ ಸಂರಕ್ಷಣೆಗಾಗಿ ಗುಜರಿ ನೀತಿ ಜಾರಿಗೆ ತರಲಾಗಿದ್ದು. ಗುಜರಿ ಮತ್ತು ಕಚ್ಚಾ ಸಾಮಗ್ರಿ ಅಮದನ್ನು ಗಣನೀಯವಾಗಿ ಕಡಿಮೆಯಾಗುತ್ತದೆ. ಎಂದು ಪ್ರಕಟಿಸಿದ್ದಾರೆ.
ಗುಜರಿ ಉದ್ಯಮದ ಮೂಲಸೌಲಭ್ಯಕ್ಕೆ ಗುಜರಾತ್ ಹೂಡಿಕೆ ಸಮಾವೇಶ ಹೊಸ ಅವಕಾಶಕ್ಕೆ ನಾಂದಿ ಹಾಡಿದ ಎಂದ ಅವರು, ಅಳಂಗ್ ಗುಜರಿ ವಾಹನಗಳ ರೂಪಾಂತರದ ಕೇಂದ್ರವಾಗಲಿದ್ದು, ಸುಮಾರು 10 ಸಾವಿರ ಕೋಟಿ ರೂ. ಹೂಡಿಕೆಯಾಗಲಿದೆ ಎಂದರು. ದೇಶದ ಪ್ರಗತಿಯಲ್ಲಿ ಈ ನೀತಿ ಮಹತ್ವದ ಮೈಲುಗಲ್ಲಾಗಿದ್ದು, ಯುವಕರು ಮತ್ತು ನವೋದ್ಯಮಗಳು ಈ ಕಾರ್ಯಕ್ರಮದ ಜೊತೆಗೂಡಬೇಕೆಂದು ಕರೆ ನೀಡಿದ ಪ್ರಧಾನಿ, ದೇಶದಲ್ಲಿ ಇನ್ನು ಮುಂದೆ ಪರಿಸರಕ್ಕೆ ಪೂರಕವಾಗುವ ವಾಹನಗಳಿಗೆ ಮಾತ್ರ ಅವಕಾಶ ಎಂದರು.
Leave a Comment