ಭಟ್ಕಳ: ಬೈಲೂರು ಸಮೀಪದ ಕಡಲ ತೀರದಲ್ಲಿ ಸಾಂಪ್ರದಾಯಿಕ ಕೈರಂಪಣಿ ಬಲೆಯನ್ನು ಬೀಸಿದ ಸಂದರ್ಭ ಹೇರಳ ಪ್ರಮಾಣದ ಮೀನು ಬಲೆಗೆ ಬಿದ್ದಿದ್ದು, ಬಲೆಯಿಂದ ಹೆಚ್ಚಾಗಿ ಉಳಿದ ಮೀನುಗಳನ್ನು ಮತ್ಸ್ಯ ಪ್ರಿಯರು ಚೀಲದಲ್ಲಿ ತುಂಬಿ ಹೊತ್ತೊಯ್ದಿದ ಘಟನೆ ಶನಿವಾರ ಸಂಜೆ ನಡೆದಿದೆ .
ಬೀಸಿದ ಬಲೆಗೆ ಹೇರಳ ಮೀನು ಬಿದ್ದಿದ್ದು, ಬಂಗುಡೆ, ಆಡುಮೀನು, ಅಂಜಾಲ, ಪಾಪ್ಲೇಟ್, ಕೊಡವಿಯಂತಹ ಮೀನುಗಳು ಬಲೆಯಲ್ಲಿ ಸಿಕ್ಕಿವೆ.
ಭಾರೀ ಪ್ರಮಾಣದ ಮೀನುಗಳನ್ನು ಎಳೆಯಲಾಗದೆ ಬಲೆಯಿಂದ ಹೊರಕ್ಕೆ ಬಿದ್ದು, ಸಾರ್ವಜನಿಕರ ಪಾಲಾಗಿತ್ತು. ಮಾಹಿತಿ ಅರಿತ ಮೀನು ಪ್ರಿಯರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಚೀಲವನ್ನು ತುಂಬಿಸಿಕೊಂಡು ತೆರಳಿರುತ್ತಾರೆ.
Leave a Comment