ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ತಹಶೀಲ್ದಾರ ಕಚೇರಿಯ ಆವರಣದಲ್ಲಿ ತಹಶೀಲ್ದಾರ ಪ್ರವೀಣ ಹುಚ್ಚನ್ನನವರ ಧ್ವಜಾರೋಹಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಶಾಸಕರ ಆರ್. ವಿ. ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಘೋಟ್ನೆಕರ, ಮಾಜಿ ಶಾಸಕ ಸುನೀಲ ಹೆಗಡೆ ಪಾಲ್ಗೊಂಡಿದ್ದರು.

ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ ರಾಷ್ಟ್ರಕ್ಕೆ ಸ್ವಾತಂತ್ರ್ಯ ಸಿಗಲು ಹಲವಾರು ಮಹನೀಯರ ತ್ಯಾಗ ಮತ್ತು ಬಲಿದಾನದ ಕಾರಣವಾಗಿದೆ. ಆದ್ದರಿಂದ ನಾವೆಲ್ಲರೂ ಜೊತೆಗೂಡಿ ದೇಶವನ್ನು ಕಟ್ಟೋಣ ಕೂಡಿ ಬಾಳೋಣ ಎಂದರು. ಎಸ್. ಎಲ್. ಘೋಟ್ನೆಕರ ಮಾತನಾಡಿ ಭಾರತ ಉನ್ನತ ಸಾಧನೆಗಳನ್ನು ಮಾಡುತ್ತಿದ್ದು ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಪಡೆದ ನೀರಜ ಚೋಪ್ರಾ ಇವರಿಗೆ ಶುಭಾಶಯಗಳನ್ನು ಹೇಳಿದರು ಹಾಗೂ ಎಲ್ಲರೂ ಕೋವಿಡ್ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸಲು ಕರೆ ಕೊಟ್ಟರು. ನಂತರ ಕೋವಿಡ್ ವಾರಿಯರಗಳನ್ನು ಸನ್ಮಾನಿಸಲಾಯಿತು. ಎಲ್ಲ ಇಲಾಖೆಯ ಅಧಿಕಾರಿಗಳು ಪುರಸಭೆಯ ಸದಸ್ಯರು ಪೊಲೀಸ ಇಲಾಖೆ, ಸಂಘಟನೆಗಳು , ಸಾರ್ವಜನಿಕರು ಪಾಲ್ಗೊಂಡಿದ್ದರು ಕಿಲ್ಲಾ ಕೋಟೆಯ ಮೇಲೆ ಪುರಸಭೆಯ ಅಧ್ಯಕ್ಷರಾದ ಅಜರುದ್ದೀನ ಬಸರಿಕಟ್ಟಿ ಧ್ವಜಾರೋಹಣ ನೆರವೇರಿಸಿದರು.
—-ವರದಿ;ಮಂಜುನಾಥ. ಎಚ್. ಎಮ್.ಹಳಿಯಾಳ.
Leave a Comment