ಬೆಂಗಳೂರು : ಇತ್ತೀಚೆಗೆ ದೇಶೀಯ ಮಟ್ಟದಲ್ಲಿ ಗೇಮಿಂಗ್ ಉದ್ಯಮ ಭರ್ಜರಿ ಬೆಳವಣಿಗೆ ಕಾಣುತ್ತಿದೆ. ಸ್ಮಾರ್ಟ್ ಫೋನ್ಗಳಲ್ಲಂತೂ ವೈವಿಧ್ಯಮಯ, ವರ್ಣರಂಜಿತ ಆಟಗಳು ಹೊಸಲೋಕವನ್ನೇ ಹೊಕ್ಕ ಅನುಭವ ನೀಡುತ್ತಿವೆ. ಆದರೆ ಇಂಥ ಆಟಗಳನ್ನು ವೀಕ್ಷಿಸಲು ಎಲ್ಲರೂ ಕಂಪ್ಯೂಟರ್ಗೆ ಹೆಚ್ಚಿನ ಅದ್ಯತೆ ನೀಡುತ್ತಿರುವುದು ಎಚ್ ಪಿ ಇಂಡಿಯಾ ಕಂಪನಿಯ ಇತ್ತೀಚಿನ ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.
ಮಾರ್ಚ ಮತ್ತು ಏಪ್ರಿಲ್ 2021 ರ ನಡುವೆ ದೇಶದ 25 ಮೆಟ್ರೋಗಳು ಶ್ರೇಣಿ 1 ಮತ್ತು ಶ್ರೇಣಿ-2 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು. 1,500 ಪ್ರತಿಕ್ರಿಯೆದಾರರು ಪಿಸಿ ಗೇಮಿಂಗ್ಗೆ ಸಂಬAಧಿಸಿದAತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡಿದ್ದಾರೆ. ಇದರಲ್ಲಿ 15 ವರ್ಷದಿಂದ 40 ವರ್ಷದೊಳಗಿನ ಪುರುಷರು (ಶೇ.72) ಮತ್ತು ಮಹಿಳೆಯರು (ಶೇ.28) ಪ್ರತಿಕ್ರಿಯೆ ನೀಡಿದ್ದಾರೆ. ಎಚ್ ಪಿ ಇಂಡಿಯಾ ಗೇಮಿಂಗ್ ಲ್ಯಾಂಡ್ಸ್ಕೇಪ್ ರಿಪೋರ್ಟ್ 2021 ರ ಪ್ರಕಾರ ಭಾರತದಲ್ಲಿ ಸ್ಮಾರ್ಟ್ಪೋಲ್ಗಿಂತ ಪಿಸಿಯೇ ಅತ್ಯುತ್ತಮ ಗೇಮಿಂಗ್ ಅನುಭವ ನೀಡುತ್ತದೆ ಎಂದು ಶೇ.89ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಸ್ಮಾರ್ಟ್ಪೋನ್ಗಿಂತ ಕಂಪ್ಯೂಟರ್ನಲ್ಲಿ ಆಟ ನೋಡುವುದು ವಿಭಿನ್ನ ಅನುಭವ ನೀಡುತ್ತದೆ ಎಂಬುದು ಇದರ ಅಭಿಪ್ರಾಯ.

ಶೇ 70 ರಷ್ಟು ಯುವಜನತೆ ಮತ್ತು ಶೇ.75ರಷ್ಟು ಕ್ಯಾಶುವಲ್ ಮತ್ತು ಉತ್ಸಾಹಿ ಗೇಮರ್ಗಳು ಕಂಪ್ಯೂಟರ್ ಬಳಕೆಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಎರಡನೇ ಶ್ರೇಣಿಯ ನಗರಗಳಲ್ಲಿ ಶೇ.95 ರಷ್ಟು ಜನರು, ಒಂದನೇ ಶ್ರೇಣಿಯ ನಗರಗಳಲ್ಲಿ ಶೇ88 ರಷ್ಟು ಮತ್ತು ಮೆಟ್ರೋ ನಗರಗಳಲ್ಲಿ ಶೇ87 ರಷ್ಟು ಜನರು ಆಟಗಳನ್ನು ವೀಕ್ಷಿಸಲು ಮೊಬೈಲ್ ಸ್ಮಾರ್ಟ್ ಮೋನ್ಗಳ ಬದಲಿಗೆ ಕಂಪ್ಯೂಟರ್ನ್ನು ಬಯಸುತ್ತಾರೆ.
ಒತ್ತಡ ನಿವಾರಕ
ಈ ಎಚ್ ಪಿ ಇಂಡಿಯಾ ಗೇಮಿಂಗ್ ಲ್ಯಾಂಡ್ ಸ್ಕೇಪ್ ರಿಪೋರ್ಟ್ ಪ್ರಕಾರ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನೆರವಾಗುತ್ತಿದೆ. ಎಂದು ಶೇ. 92 ರಷ್ಟು ಜನರು ಹೇಳಿದ್ದಾರೆ. ಹೊಸ ಸ್ನೇಹಿತರನ್ನು ಹೊಂದಲು ಸಹಾಯ ಮಾಡುತ್ತದೆ ಎಂದು ಶೇ.91 ರಷ್ಟು ಜನರು ನಂಬಿದ್ದಾರೆ. ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಶೇ.91 ರಷ್ಟು ಜನರು ಹೇಳುತ್ತಾರೆ.
Leave a Comment