ಶಿರಸಿ : ಹಲವು ಪ್ರಕರಣಗಳಲ್ಲಿ ಭಾಗಿಯಾದ ಖತರನಾಕ್ ಕಳ್ಳನೋರ್ವನನ್ನು, ಬೈಕ್ ಕಳವು ಕೇಸ್ ದಾಖಲಾದ 24 ಗಂಟೆಯೊಳಗೆ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಹೆಡೆಮರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ತಾರಗೋಡನಲ್ಲಿ ಸೋಮವಾರ ಬೈಕ್ ಕಳವು ಮಾಡಿದ್ದ ಶಿರಸಿಯ ನವೀನ್ ಜೌಹಾಣ ಬಂಧಿತ ಆರೋಪಿ ಯಾಗಿದ್ದಾನೆ.

ಈತ ಕಾನಸೂರ ಕಾಳಿಕಾಂಬಾ ಸ್ಟುಡಿಯೋದಲ್ಲಿ ಕಳವುಮಾಡಿದ ಪ್ರಕರಣ ದಲ್ಲಿ ನಾಲ್ಕೂವರೆ ವರ್ಷ ಜೈಲು ಶಿಕ್ಷೆಯನ್ನು ಅನುಬವಿಸಿದ್ದ. ಈತ ಈ ಹಿಂದೆ ಜಿಲ್ಲೆಯಲ್ಲಿ 25 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡು ಗ್ರಾಮೀಣ ಠಾಣೆಯ ಪೊಲೀಸರು ಬೈಕ್ ವಶಕ್ಕೆ ಪಡೆದಿದ್ದು, ತನಿಖೆ ಕೈಗೊಂಡಿದ್ದಾರೆ.
Leave a Comment