ಶಿರಸಿ : ನವಜಾತಶಿಶುವನ್ನು ತಾಲೂಕಿನ ಗೌಡಳ್ಳಿ ಸಮೀಪದ ಜೋಗಿಸರ ಬಸ್ ತಂಗುದಾಣದ ಬಳಿ ಚೀಲದಲ್ಲಿ ಬಿಟ್ಟು ಹೋಗಿರುವ ನಡೆದಿದೆ. ತಾಲೂಕಿನ ಕೊಗಿಲಕುಳಿ ಗ್ರಾಮದ ಮಾದೇವಿ ಎಂಬುವವರಿಗೆ ಈ ಮಗು ದೊರೆತಿದೆ. ಸದ್ಯ ಈ ಮಗುವನ್ನು ಇಲ್ಲಿನ ಸಹಾಯ ಟ್ರಸ್ಟಗೆ ಹಸ್ತಾಂತರಿಸಲಾಗಿದೆ. ಟ್ರಸ್ಟ್ ಅಧ್ಯಕ್ಷ ಸತೀಶ್ ಶೆಟ್ಟಿ ಅನಾರೋಗ್ಯಕ್ಕೆ ತುತ್ತಾಗಿರುವ ಮಗುವನ್ನು ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಖಲಿಸಿದ್ದಾರೆ. ಮಕ್ಕಳ ತುರ್ತುನಿಗಾ ಘಟಕದಲ್ಲಿರಿಸಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪತ್ತೆಯಾಗಿದ್ದು ಹೇಗೆ : ಮಾದೇವಿ ಅವರು ಪ್ರತಿದಿನ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಎಂದಿನAತೆ ಬುಧುವಾರ ತಂಗುದಾಣಕ್ಕೆ ಬಂದಾಗ ಚೀಲ ಪತ್ತೆಯಾಗಿದೆ. ಯಾರೋ ಮರತು ಹೋಗಿರಬೇಕು ಎಂದು ಆ ಜೀಲವನ್ನು ಮನೆಗೆ ತಂದು ನೋಡಿದ್ದರೆ. ಈ ವೇಳೆ ಚೀಲ ಬಿಚ್ಚುತ್ತಿದ್ದಂತೆ ಮಗು ಅಳುವುದು ಕೇಳಿಸಿದೆ. ಭಯಗೊಂಡ ಮಾದೇವಿ ಸ್ಥಳೀಯರಿಗೆ ಮಾಹಿತಿ ನೀಡಿ ನಂತರ ಪೊಲೀಸರಿಗೂ ವಿಷಯ ತಿಳಿಸಿದ್ದಾರೆ.
ಅವಧಿಪೂರ್ವ ಜನಿಸಿದ ಶಿಶು ಇದಾಗಿದ್ದು, 1.6 ಕೆಜಿ ತೂಕ ಹೊಂದಿದೆ. ಜನಿಸಿ ನಾಲ್ಕು ದಿನ ಆಗಿರುವ ಆಧ್ಯತೆಗಳಿದ್ದು ಮಗುವಿಗೆ ಎಡಗೈ ಮುಂಭಾಗದ ಮೂಳೆ ಬೆಳವಣಿಗೆ ಕುಂಟಿತವಾಗಿದ್ದು, ಆರು ಬೆರಳನ್ನು ಹೊಂದಿದೆ. ಗಾಳಿ. ಮಳೆಯ ವಾತಾವರಣದಲ್ಲಿದ್ದ ಕಾರಣ ಮಗುವಿನ ಆರೊಗ್ಯ ಹದಗೆಟ್ಟಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬAಧ ಪ್ರಕರಣ ಸಹ ದಾಖಲಾಗಿದ್ದು, ಮಗುವಿನ ಪೋಷಕರು ಪತ್ತೆಗೆ ಪ್ರಯತ್ನ ಸಾಗುತ್ತಿದೆ.
Leave a Comment