ಯಲ್ಲಾಪುರ : ಪಟ್ಟಣದ ಕಾಳಮ್ಮ ನಗರದ ನಿಶಾ ಬ್ಯೂಟಿ ಪಾರ್ಲರ್ ನ ಒಡತಿ ಮಮತಾ ನಾಯ್ಕ ಅವರು ಸ್ಮೃತಿ ಸಾಧನಾ ಮೆಮೊರೀಸ್ ಅಚಿವ್ಮೆಂಟ್ ಪ್ರೌಢ್ ಇಂಡಿಯನ್ ಪ್ರಶಸ್ತಿಯ ಬೆಸ್ಟ್ ಮೇಕಪ್ ಆರ್ಟಿಸ್ಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೇಕಪ್ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಕಳೆದ ೧೬ ವರ್ಷಗಳಿಂದ ತಮ್ಮದೇ ಸ್ವಂತ ಬ್ಯೂಟಿ ಪಾರ್ಲರ್ ನಡೆಸುತ್ತಾ ಜೊತಗೆ ೧೦ ವರ್ಷಗಳಿಂದ ರುಡ್ ಸೆಟ್ ನಂತಹ ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳಲ್ಲಿ ಬ್ಯೂಟಿ ಪಾರ್ಲರ್ ತರಬೇತುದಾರರಾಗಿಯೂ ಸೇವೆ ಸಲ್ಲಿಸುತ್ತಿರುವ ಇವರು, ಬ್ರೈಡಲ್ ಕಾಂಪಿಟೇಷನ್ ನಲ್ಲಿ ಭಾಗವಹಿಸಿ ಬೆಸ್ಟ್ ಮೇಕಪ್ ಆರ್ಟಿಸ್ಟ್ ಎಂಬ ಪ್ರಶಸ್ತಿಯ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಹಿಳೆ ಮನಸ್ಸು ಮಾಡಿದರೆ ಸಂಸಾರದ ರಥವನ್ನು ತೂಗಿಸುತ್ತಲೇ ತಾವಿದ್ದ ಜಾಗದಲ್ಲೇ ಸಾಧನೆಯ ಮೆಟ್ಟಿಲನ್ನು ಏರಬಹುದು ಎಂದು ತೋರಿಸಿದ್ದಾರೆ.
ಕಳೆದ ವರ್ಷ ಹುಬ್ಬಳ್ಳಿಯಲ್ಲಿ ನಡೆದ “ಮಿಸ್ ಇಂಡಿಯಾ ಕರ್ನಾಟಕ” ದ ರೂಪದರ್ಶಿಗಳಿಗೆ ಮೇಕಪ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ೭೫ ನೇ ಸ್ವಾತಂತ್ರ್ಯ ದಿನದಂದು ಹುಬ್ಬಳ್ಳಿಯ ಜಿಮ್ಖಾನಾ ಕ್ಲಬ್ ಸಭಾಂಗಣದಲ್ಲಿ ಸ್ಮೃತಿ ಸಾಧನಾ ಸಂಸ್ಥೆ ಹಾಗೂ ವಿವಿದ ಸಂಸ್ಥೆಗಳ ಸಹಯೋಗದಲ್ಲಿ ಪ್ರೌಢ್ ಇಂಡಿಯನ್ ಪ್ರಶಸ್ತಿಯ ಬೆಸ್ಟ್ ಮೇಕಪ್ ಆರ್ಟಿಸ್ಟ್ ಪ್ರಶಸ್ತಿನೀಡಿ ಗೌರವಿಸಲಾಯಿತು. ಸ್ಮೃತಿ ಸಾಧನಾ ಸಂಸ್ಥೆಯ ನಿರ್ದೇಶಕಿ ರೇಷ್ಮಾ ಫರ್ನಾಂಡಿಸ್ ಪ್ರಶಸ್ತಿ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶಿವಣ್ಣ ಎನ್.ಕೆ , ಕೇಂದ್ರ ಮೀಸಲು ಸಶಸ್ತçಪಡೆ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡ ಪಾಟೀಲ, ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
Leave a Comment