ಹೊನ್ನಾವರ : 44ರ ಹರೆಯದಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮಾಜಿ ಪ್ರಧಾನಿ ದಿ. ರಾಜೀವ್ಗಾಂಧಿ ಭವ್ಯ ಭಾರತದ ಕನಸನ್ನು ಕಂಡಿದ್ದರು ಎಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಹೇಳಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಏರ್ಪಡಿಸಿದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ 77ನೇ ಮತ್ತು ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸುರವರ 106 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಸೇರಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ದೇಶದ ಶಕ್ತಿ ಯುವಕರು ಎಂದು ನಂಬಿದ್ದ ರಾಜೀವ್ ಗಾಂಧಿ ತನ್ನ ಅಧಿಕಾರಾವಧಿಯಲ್ಲಿ ದೇಶದ ಯುವಕರಿಗೆ 18ನೇ ವಯಸ್ಸಿಗೆ ಮತದಾನದ ಹಕ್ಕನ್ನು ನೀಡುವ ಮೂಲಕ ಲೋಕಸಭೆಯಲ್ಲಿ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದ್ದರು ಎಂದು ಸಂತಸ ವ್ಯಕ್ತಪಡಿಸಿದರು. ದೂರದ ಅಮೇರಿಕಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ಆಧುನಿಕ ತಂತ್ರಜ್ಞಾನದ ಪಿತಾಮಹ ಸ್ಯಾಮ್ ಪಿತ್ರಾಡೊgವರÀÀನ್ನು ಭಾರತಕ್ಕೆ ಕರೆತಂದು ಭಾರತದಲ್ಲಿ ಕಂಪ್ಯೂಟರ್ ಯುಗಕ್ಕೆ ಭದ್ರ ಬುನಾದಿ ಹಾಕಿದ್ದರು ಎಂದರು. ಇಂದು ಭಾರತದಲ್ಲಿ ಮೊಬೈಲ್, ಕಂಪ್ಯೂಟರ್ ತಂತ್ರಜ್ಞಾನ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದರೆ ಅದು ದಿ. ರಾಜೀವ್ ಗಾಂಧಿಯವರ ಶ್ರಮ ಎಂದು ಹೆಮ್ಮೆ ವ್ಯಕ್ತ ಪಡಿಸಿದರು.
ಅದೇ ರೀತಿ ದೇಶ ಕಂಡ ಅತ್ಯುತ್ತಮ ಮುಖ್ಯಮಂತ್ರಿ ಎಂದು ಹೆಸರುವಾಸಿಯಾದ ದಿ.ದೇವರಾಜ್ ಅರಸು ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ನಮಗೆಲ್ಲ ಹೆಮ್ಮೆ ಎನಿಸುತ್ತಿದೆ. ದೇಶದಲ್ಲೆ “ಉಳುವವನೇ ಒಡೆಯ” ಕಾನೂನನ್ನು ಪ್ರಪ್ರಥಮವಾಗಿ ಜಾರಿಯಲ್ಲಿ ತಂದ ರಾಜ್ಯ ಕರ್ನಾಟಕ. ಅದರ ಸಂಪೂರ್ಣ ಶ್ರೇಯಸ್ಸು ದಿ. ದೇವರಾಜ್ ಅರಸುರವರಿಗೆ ಸಲ್ಲುತ್ತದೆ ಎಂದು ತೆಂಗೇರಿ ನುಡಿದರು. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಮತ್ತು ಶೋಷಿತರಿಗೆ ತಮ್ಮ ಜೀವನದ ಕೊನೆಯ ಉಸಿರಿರುವವರೆಗೂ ಧ್ವನಿಯಾಗಿದ್ದರು ಎಂದರು.
ಇಂತಹ ಎರಡು ಮಹಾ ಚೇತನಗಳು ನಮ್ಮ ನಡುವೆ ಮತ್ತೆ ಹುಟ್ಟಿ ಬರಲಿ ಎಂದು ಹಾರೈಸಿದರು. ಕಾರ್ಯಕ್ರಮಕ್ಕೂ ಮುನ್ನ ದಿ. ರಾಜೀವ್ಗಾಂಧಿ ಮತ್ತು ದಿ. ದೇವರಾಜ್ ಅರಸುರವರ ಭಾವಚಿತ್ರಕ್ಕೆ ಸೇರಿದ ಪಕ್ಷದ ಕಾರ್ಯಕರ್vÀರು ಪುಷ್ಪ ನಮನ ಸಲ್ಲಿಸಿ, ಒಂದು ನಿಮಿಷದ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ, ಅಲ್ಪಸಂಖ್ಯಾತ ವಿಭಾಗದ ಜಕ್ರಿಯಾ ಶೇಖ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ, ಕಾರ್ಯದರ್ಶಿ ಮಹೇಶ ನಾಯ್ಕ, ಸೇವಾದಳದ ಕೃಷ್ಣ ಮಾರಿಮನೆ, ಹಿಂ.ವರ್ಗ ವಿಭಾಗದ ಕಾರ್ಯದರ್ಶಿ ಗಜು ನಾಯ್ಕ, ಪಕ್ಷದ ಹಿರಿಯ ಮುಖಂಡರಾದ ಬಾಲಚಂದ್ರ ನಾಯ್ಕ, ಮಂಜುನಾಥ ಖಾರ್ವಿ, ಮಾದೇವ ನಾಯ್ಕ, ಕರ್ಕಿ, ಹನೀಫ್ ಶೇಖ, ಜೋಸೆಫ್ ಡಾÀಯಸ್, ಉದಯ್ ಮೇಸ್ತ, ಚಂದ್ರಶೇಖರ್ ಚಾರೋಡಿ, ನೆಲ್ಸನ್ ರೊಡ್ರಗೀಸ್, ಮಾದೇವ ನಾಯ್ಕ, ಹನೀಫ ಶೇಖ, ಇನ್ನೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
Leave a Comment