ಹೊನ್ನಾವರ: ಗೈರ ಕಾನೂನು ಹೊನ್ನಾವರ ಮತ್ತು ಮಂಕಿ ಬಂದರು ಭೂಮಿಯ ವಿಸ್ತಾರ ಅಧಿಸೂಚನೆ ದಯಮಾಡಿ ರದ್ದು ಮಾಡುವಂತೆ ಕರಾವಳಿಯ ವಿವಿಧ ಸಂಘಟನೆಗಳಿಂದ ಮುಖ್ಯ ಮಂತ್ರಿಗಳಿಗೆ ಇಮೇಲ್ ಮನವಿ ಅಭಿಯಾನ ಪ್ರಾರಂಭಿಸಿ ದ್ದಾರೆ.
ಕರ್ನಾಟಕ ಪಿಡಬ್ಲ್ಯುಡಿ ಮತ್ತು ಬಂದರು ಇಲಾಖೆಯ ಅದಿಸೂಚನೆ PWಆ 142 PSP 2011 ರ 03.08.2013 ಇದರ ಮೂಲಕ ಹೊನ್ನಾವರ ಮತ್ತು ಮಂಕಿ ಬಂದರು ಇಲಾಖೆಯ ಭೂಮಿಯ ಮಿತಿಯನ್ನು ಭಾರತೀಯ ಪೋರ್ಟ್ ಕಾಯಿದೆ 1908 ಸೆಕ್ಷನ್ 5 ರ ಅಡಿ ಅಧಿಕಾರವಿದೆಯದಂತ ತಪ್ಪಾಗಿ ತೋರಿಸಿ ಯಾರಿಗೂ ಸಂಬಂಧಪಟ್ಟ ಪ್ರದೇಶದ ಬಳಕೆದಾರರ ಇಲಾಖೆಯವರಿಗೆ ಹೇಳದೆ ಕೇಳದೇ, ಬಂದರು ಮಿತಿಯನ್ನು ವಿಸ್ತರಿಸಿ ಅಧಿಸೂಚನೆಯನ್ನು ಹೊರ ಡಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಭಾರತೀಯ ಪೋರ್ಟ್ ಕಾನೂನು 1908 ಸೆಕ್ಷನ್ 5 ರಲ್ಲಿ ಬರೆದಿರುವುದು ಎರಡು ಪೋರ್ಟ್ ಭೂಮಿಯನ್ನು ಕೂಡಿಸಲು ಅಧಿಕಾರ ನೀಡಲಾಗಿದೆಯೇ ವಿನಃ ನಗರ ಸಭೆ ಅಥವಾ ಗ್ರಾಮ ಪಂಚಾಯಿತಿಯ ಭೂಮಿಯನ್ನು ಸೇರಿಸಲು ಇಲ್ಲ. ಈ ಕರಾವಳಿ ತೀರದ ಸಮುದ್ರ ಮತ್ತು ನದಿ ದಂಡೆಗಳು, ಜಾಗತಿಕ ಸಿದ್ಧಾಂತ ಪಬ್ಲಿಕ್ ಟ್ರಸ್ಟ ಡಾಕ್ಟರೈನ ಮೂಲಕ ಎಲ್ಲ ಪ್ರಜೆಗಳ ಜನ್ಮಸಿದ್ದ ಹಕ್ಕಾಗಿದೆ. ಸಾವಿರಾರು ಮೀನುಗಾರರ ಮನೆ-ವಾಸ್ತವ್ಯ ಬಳಕೆಯಲ್ಲಿರುವ ನೆಲೆಯಾಗಿದೆ.ನದಿ-ಹಿನ್ನಿರು, ಬೀಚ್ಗಳನ್ವು ಎಲ್ಲಾ ಸ್ಥಳೀಯರು ಮತ್ತು ಪ್ರವಾಸಿಗರೂ ವಿಹಾರಕ್ಕಾಗಿ ದಿನವೂ ಉಪಯೋಗಿಸುತ್ತಿದ್ದಾರೆ.
ಸಂಪ್ರದಾಯಿಕ ಮೀನುಗಾರರು ಇಲ್ಲಿ ಅವರ ಉದ್ಯೊಗ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಹಲವು ಬಗೆಯ ಜೀವವೈವಿಧ್ಯ ಪರಿಸರ ತಾಣಗಳಿವೆ, ಮೀನು ಕಡಲಾಮೆಗಳ ಸಂತಾನೊತ್ಪತ್ತಿ ಪ್ರದೇಶಗಳಿವೆ. ಆದ್ದರಿಂದ ನೀವು ಹೊರಡಿಸಿರುವ ಈ ಜನವಿರೋಧಿ ಮತ್ತು ಪರಿಸರ ಅಧಿಸೂಚನೆಯನ್ನು ಶೀಘ್ರವೇ ರದ್ದು ಮಾಡಬೇಕೆಂದು ಇಮೇಲ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
Leave a Comment