ಕುಮಟಾ : ತಾಲೂಕಿನಲ್ಲಿರುವ ರೆಸಾರ್ಟ್ ಲಾರ್ಡ್ಗಳಲ್ಲಿ ಪ್ರವಾಸಿಗರ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮವಹಿಸಬೇಕು ಎಂದು ಪಿಎಸ್ಐ ಆನಂದಮೂರ್ತಿ ರೆಸಾರ್ಟ್ ಮಾಲಿಕರ ಸಭೆ ಕರೆದು ಸೂಚಿಸಿದರು.
ಈವೇಳೆ ಸುರಕ್ಷತೆಯ ಕುರಿತು ಮಾಹಿತಿ ನೀಡಿದ ಅವರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾಡ್ಜ್, ಹೋಂ ಸ್ಟೇ, ರೆಸಾರ್ಟ್ ನಡೆಸುವವರು ಪ್ರವಾಸಿಗರು ಅಗತ್ಯ ಮಾಹಿತಿ ನೀಡಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಅಪರಾಧಗಳನ್ನು ತಡೆಯುವ ಮತ್ತು ಅಪರಾಧಗಳನ್ನು ಪತ್ತೆ ಹಚ್ಚುವ ದೃಷ್ಟಿಯಿಂದ ಪೊಲೀಸ್ ಠಾಣಾ ವ್ಯಪ್ತಿಯಿಂದ ನೀಡಲಾಗುವ ನಿಉಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಸಕ್ಷಮ ಪ್ರಾಧಿಕಾರದಿಂದ ಪರವಾನಗಿಯನ್ನು ಕಡ್ಡಾಯವಾಗಿ ಪಡೆದುಕೊಂಡಿದ್ದು, ಪರವಾನಗಿಯನ್ನು ಕಾಲಕಾಲಕ್ಕೆ ನಿಯಮಾನುಸಾರ ನವೀಕರಿಸತಕ್ಕದ್ದು ಎಂದರು.
ಯಾವುದೇ ರೀತಿಯ ವೇಶ್ಯಾವಾಟಿಕೆ, ಜೂಜಾಟ ಹಾಗೂ ಇತರೆ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಪರವಾನಗಿ ಇಲ್ಲದೆ ಯಾವುದೇ ರೀತಿಯ ಮಧ್ಯಪಾನ ಮಾಡಲು ಅವಕಾಶ ನೀಡಬಾರದು ಯಾವುದೇ ರೀತಿಯ ಮಾಧಕ ವಸ್ತು ನಿದ್ತಾಜನಕ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಹಾಗೂ ಅವುಗಳ ಸೇವನೆಗೆ ಅವಕಾಶ ಕೊಡಬಾರದು ಅತಿಥಿಗಳಿಗೆ ಎದ್ದು ಕಾಣುವಂತೆ ಅವರ ಸುರಕ್ಷತೆಗೆ ಸಂಬAಧಿಸಿದ ಮಾಹಿತಿಗಳ ಫಲಕಗಳನ್ನು ಎದ್ದು ಕಾಣುವಂತೆ ಅಳವಡಿಸಬೇಕು, ಮಹಿಳೆಯರು ಹಾಗೂಮಕ್ಕಳು ಸುರಕ್ಷತೆಗೆ ಸಂಬAಧಿಸಿದAತೆ ಅಗತ್ಯವಾದ ಎಲ್ಲಾ ರೀತಿಯ ಮನ್ನೇಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಯಾವುದೇ ಅನುಮಾನಾಸ್ವದ ವ್ಯಕ್ತಿಗಳು ಬಂದರೆ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ತಂಗುವ ಅತಿಥಿಗಳಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿರಬೇಕು. ರಾತ್ರಿ ವೇಳೆ ಮಹಿಳೆಯರು ಬೀಚ್ಗಳಲ್ಲಿ ತಿರುಗಾಡುವಾಗ ಅವರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಈ ಎಲ್ಲ ನಿಯಮಗಳನ್ನು ಕಾನೀನುಬದ್ಧವಾಗಿ ಕಾನೂನಿನ ಪ್ರಕಾರ ಪಾಲಿಸಲು ಬದ್ಧರಾಗಿದ್ದು, ಯಾವುದೇ ನಿಯಮಗಳ ಉಲ್ಲಂಘನೆ ಆಗದಂತೆ ನೀಎಇಕೊಳ್ಳಬೇಕು ಎಂದುಅವರು ಎಚ್ಚರಿಕೆ ನೀಡಿದರು.
ಪ್ರತಿದಿನ ಪೋಲಿಸ್ ಠಾಣೆಗೆ ಅತಿಥಿಗಳ ಮಾಹಿತಿ ನೀಡಬೇಕು..
ಕಟ್ಟಾಯವಾಗಿ ತಮ್ಮ ಲಾಡ್ಜ್, ಹೋಂ ಸ್ಟೇ ರೆಸಾರ್ಟ್ಗಳ ಪ್ರವೇಶದ್ದಾರ ಕೌಂಟರ್ ಹಾಗೂ ಅವಶ್ಯಕತೆ ಇರುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಅವು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು, ಜೊತೆಗೆ ಎಲ್ಲಾ ಅತಿಥಿಗಳ ಪ್ರವಾಸಿಗರ ಪೋಟೋ ಐಡಿ ಕಾರ್ಡ್, ಸಂಪೂರ್ಣ ವಿಳಾಸ ಪೋನ್ ನಂಬರ್ಗಳನ್ನು ಕಡ್ಡಾಯವಾಗಿ ಪಡೆದುಕೊಂಡು ಸಂಬAಧಪಟ್ಟ ರಜಿಸ್ಟರ್ನಲ್ಲಿ ನಮೂದಿಸಬೇಕು ಅತಿಥಿಗಳು ಬಂದ ಸಮಯ ಹಾಗೂ ತೆರಳುವ ಸಮಯವನ್ನು ಕಡ್ಡಾಯವಾಗಿ ರಜಿಸ್ರ್ನಲ್ಲಿ ನಮೂದಿಸಬೇಕು ಪ್ರತಿದಿನ ಬೆಳ್ಳಿಗೆ 11 ಗಂಟೆಗೆ ವಾಸುಸಿರುವ ಅತಿಥಿಗಳು ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡಬೇಕು. ಎಂದು ಪಿಎಸ್ಐ ಆನಂದಮೂರ್ತಿ ಸೂಚಿಸಿದ್ದಾರೆ.
ವದೇಶಿಯರು ಬಂದಾಗ ಕಟ್ಟಾಯವಾಗಿ ಅವರ ವೀಸಾ ಪಾಸ್ ಪೋರ್ಟ್ಗಳನ್ನು ಪರಿಶೀಲಿಸಿ “ಸಿ” ಪಾರ್ಮನಲ್ಲಿ ಸಪೂರ್ಣ ಮಾಹಿತಿಯನ್ನು ತುಂಬಿ ಕೂಡಲೇ ಪೊಲೀಸ್ ಠಾಣೆಗೆ ಬಂದು ಪ್ರತಿಯನ್ನು ಸಲ್ಲಿಸಬೇಕು ಯಾವುದೇ ಅಪ್ರಾಪ್ತ ಹುಡುಗಹುಡಗಿಯರು ಬಂದರೆ ಅವರಿಗೆ ರೂಮನ್ನು ನೀಡಬಾರದು ಸಧಿಕಾರಿಗಳು ಕಾನೀನುಬದ್ಧವಾಗಿ ತಪಾಸಣೆ ನಡೆಸುವಾಗ ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕು ಎಂದು ರೆಸಾರ್ಟ್ ಲಾಡ್ಜ್ ಹೋಂ ಸ್ಟೇಗಳ ಮಾಲಕರಿಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ರೆಸಾರ್ಟ್ ಲಾಡ್ಜ್, ಹೋಂ ಸ್ಟೇ ಮಾಲಿಕರು ಇದ್ದರು,
Leave a Comment