ಕುಮಟಾ : ಪಟ್ಟಣದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಮಟ್ಟದ ಲಿಖಿತ ಪ್ರಬಂಧ ಸ್ಪರ್ಧೆಯಲ್ಲಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ.
ರಮ್ಯಾ ಶ್ರೀಧರ ಭಟ್ಟ ಹಾಗೂ ಪಲ್ಲವಿ ರಮಾನಂದ ನಾಯ್ಕ ಇವರು ದಾವಣಗೆರೆಯಾ ಪ್ರೇಮಾ ಅರುಣಾಚಲ ರೇವಣಕರ್ ಪ್ರತಿಷ್ಠಾನದಿಂದ ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ರಾಜ್ಯಮಟ್ಟದ ಲಿಖಿತ ಪ್ರಬಂಧ ಸ್ಪರ್ಧೆಯಲ್ಲಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಪಡೆದಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆಗೆ ಮಹಾವಿದ್ಯಾಲಯದ ಪ್ರಾರ್ಚಾರ್ಯೆ ಡಾ.ಪ್ರೀತಿ ಭಂಡಾರಕರ್, ಕೆನರಾ ಕಾಲೇಜ್ ಸೊಸೈಟಿಯ ಅಧ್ಯಕ್ಷ ರಘು ಪಿಕಳೆ, ಕಾರ್ಯಾಧ್ಯಕ್ಷೆ ಡಿ.ಎಮ್.ಕಾಮತ್, ಕಾರ್ಯದರ್ಶಿ ಸುಧಾಕರ ನಾಯಕ, ಆಡಳಿತಮಂಡಳಿಯ ಎಲ್ಲ ಸದಸ್ಯರ ಹಾಗೂ ಮಹಾವಿದ್ಯಾಲಯದ ಭೋಧಕ-ಬೋಧಕೇತರ ಸಿಬ್ಬಂದಿಗಳು ಹರ್ಷವ್ಯಕ್ತಪಡಿಸಿದ್ದಾರೆ.
Leave a Comment