ಕುಮಟಾ : ನೃತ್ಯಾಭಿನಯದಲ್ಲಿ ಎಲ್ಲರನ್ನೂ ಮೋಡಿ ಮಾಡುವ ಮೂರು ವರ್ಷದ ಪುಟ್ಟ ಬಾಲಕಿ ಆದ್ಯಾ ಪ್ರಕಾಶ ನಾಯಕ ಹೆಸರು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ. ಉಡಪಿಯ ಹೆಬ್ರೆ ನಿವಾಸಿಯಾದ ಆದ್ಯಾ ಪ್ರಕಾಶ ನಾಯಕ ಕ್ಲಾಸಿಕಲ್ ಡ್ಯಾನ್ಸ್ ನಲ್ಲಿ ವಲ್ಡ್ ರೆಕಾರ್ಡ್ ಮಾಡಿದ ಪುಟ್ಟ ಬಾಲಿಕಿ ಏಪ್ರಿಲ್ 2021ರಲ್ಲಿ ನಡೆದ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್, ವಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್ ಎಂಬ ಆನ್ ಲೈನ್ ಸ್ಪರ್ಧೆಯಲ್ಲಿ ವಿವಿಧ ರಾಷ್ಟçಗಳಿಂದ ಸುಮನಾರು 1294 ಸ್ಪರ್ಧಿಗಳು ಭಾಗವಹಿಸಿದ್ದರು. ಕ್ಲಾಸಿಕಲ್ ಡ್ಯಾನ್ಸ್ ವಿಭಾಗದಲ್ಲಿ ಆದ್ಯಾ ಪ್ರಕಾಶ ನಾಯಕ ಹೆಚ್ಚು ಸಮಯದ ವೆರೆಗೆ ನೃತ್ಯ ಪ್ರದರ್ಶನ ಮಾಡುವ ಮೂಲಕ ತನ್ನ ಹೆಸರು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗುವಂತೆ ಮಾಡಿದ್ದಾಳೆ.

ಕುಮಟಾದ ಹಿರಿಯ ಸಿವಿಲ್ ನ್ಯಾಯಾದೀಶ ಪ್ರಕಾಶ ನಾಯಕ ಹೆಬ್ರಿ ಮತ್ತು ವಿದುಷಿ ಸ್ಮೀತಾ ಪ್ರಕಾಶ ನಾಯಕ ದಂಪತಿಯ ಪುತ್ರಿಯಾದ ಆದ್ಯಾ ಒಂದು ವರ್ಷದ ಮಗುವಿರುವಾಗಲೇ ನೃತ್ಯ ಮತ್ತು ಅಭಿನಯದಲ್ಲಿ ವಶೇಷ ಆಸಕ್ತಿ ಹೊಂದಿದ್ದಳು. ಪ್ರಪ್ರಥಮ ಬಾರಿಗೆ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಅಂತರಾಷ್ಟಿçÃಯ ಆನ್ ಲೈನ್ ಸ್ಪರ್ಧೆಯಲ್ಲಿ ನೃತ್ಯ ಕಿಂಕಿಣಿ ಸೆಮಿ ಕ್ಲಾಸಿಕಲ್ ನೃತ್ಯ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ, ರಾಜ್ಯ ಮಟ್ಟದ ಛದ್ಮವೇಷ ಸ್ಪರ್ಧೆ -2020ರಲ್ಲಿ ವಶೇಷ ಬಹುಮಾನ, 2020ರ ಲವ್ ಇಂಡಿಯಾ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ,
ಕಲಾವತಿ ನಾಟ್ಯ ಕಲಾಕೇಂದ್ರ ನಡೆಸಿದ ಸೈಲಿ ಬೇಬಿ ಕಾಂಪಿಟೇಷನ್ 2020ರಲ್ಲಿ ತೃತೀಯ ಸ್ಥಾನ, ದಿವ್ಯಮ ರಾಯ್ ಇಂಡಿಯನ್ ಕ್ಲಾಸಿಕಲ್ ಸಂಸ್ಥೆ ವತಿಯಿಂದ ನಡೆದ 2020ರ ಛದ್ಮವೇಷ ಸ್ಫರ್ಧೆಯಲ್ಲಿ ದ್ವೀತಿಯ ಬಹುಮಾನ ಪಡೆದ ಕೀರ್ತಿ ಈ ಪುಟಾಣಿ ಬಾಲಕಿಯಗಿದೆ. ಅಲ್ಲದೇ ಸ್ಥಳೀಯ ಮಟ್ಟದ ಅನೇಕ ಸ್ಪರ್ಧೆಗಳಲ್ಲೂ ಭಾಗವಹಿಸಿ, ಬಹುಮಾನ ಪಡೆದು, ಎಲ್ಲರ ಮೆಚ್ಚುಗೆಗೆ ಪತ್ರಳಾಗಿದ್ದಾಳೆ.
ಈನ್ನು ಈ ಪುಟ್ಟ ಬಾಲಕಿ ಆದ್ಯಾ ಮಾಡೆಲಿಂಗ್ ಬಗ್ಗೆ ವಶೇಷ ಆಸಕ್ತಿ ಹೊಂದಿದ್ದು, ಈಗಾಗಲೇ ಬೆಂಗಳೂರಿನ ಬಾಂಬೋ ಮತ್ತು ಕ್ಲಾಸಿಕ್ ವೊಟನ್ ಫರ್ನಿಚರ್ ಜಾಹೀರಾತಿನಲ್ಲಿ ಬಾಲ ರೂಪದರ್ಶಿಯಾಗಿ ನಟಿಸಿರುವ ಭಾವಚಿತ್ರ ಪ್ರಕಟವಾಗಿದೆ. ಭರತನಾಟ್ಯದ ಹಸ್ತ ಮುದ್ರಿಕೆಗಳನ್ನು ಅಭಿನಯಿಸಿ ತೋರಿಸುತ್ತಾಳೆ. ಗಣಿತ ಗಣೇಶ ಸರಸ್ವತಿ ಮತ್ತು ನಟರಾಜನ ಶ್ಲೋಕಗಳನ್ನು ಹೇಳುವ ಜೊತೆಗೆ ತನ್ನದೇ ಶೈಲಿಯಲ್ಲಿ ಹೆಚ್ಚೆ ಹಾಕುವ ಮೂಲಕ ಎಲ್ಲರ ಗಮನ ಸೆಳೆಯುವ ಈ ಪುಟ್ಟಾ ಬಾಲಕಿಯ ನೈತ್ಯಾಭಿನಯದಲ್ಲಿ ಇನ್ನು ಹೆಚ್ಚಿನ ಸಾದನೆ ಮಾಡಲಿ ಎಂಬುದು ಎಲ್ಲರ ಆಶಯವಾಗಿದೆ.
Leave a Comment