ಮಂಗಳೂರು : ಕೇರಳದಿಂದ ಮಂಗಳೂರಿಗೆ ಆಗಮಿಸಲು ನಕಲಿ ಆರ್ಟಿಪಿಸಿಆರ್ ನೆಗೆಟಿವ್ ವರದಿ ತಂದಿದ್ದ ಆರೋಪದಡಿ ತಲಪಾಡಿ ಗಡಿಯಲ್ಲಿ ಎರಡು ದಿನಗಳಲ್ಲಿ 4 ಪ್ರತ್ಯೇಕ ಪ್ರಕರಣಗಳಲ್ಲಿ 7 ಮಂದಿಯನ್ನು ಬಂಧಿಸಲಾಗಿದೆ. ಮಂಗಳೂರು ಪೋಲೀಸ್ ಆಯುಕ್ತ ಎನ್. ಶಶಿಕುಮಾರ ಮತನಾಡಿ ಬಂಧಿತರಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದ ಓರ್ವನಿದ್ದು.
ಈಗಾಗಲೇ ಬಂದಿಸಲಾಗಿದ್ದ ನಾಲ್ವರನ್ನು ನ್ಯಾಯಾಲಯದೆದರು ಹಾಜರುಪಡಿಸಲಾಗಿದೆ. ಎಂದರು. ತಪಾಸಣೆ ವೇಳೆ ನಾಲ್ವರನ್ನು ನಕಲಿ ಆರ್ಟಿಪಿಸಿಆರ್ ದಾಖಲೆಗಳೊಂದಿಗೆ ಬಂಧಿಸಲಾಗಿತ್ತು. ಇಬ್ಬರನ್ನು ಇಂದು ಮಧ್ಯಾಹ್ನ ತಪಾಸಣೆಯ ವೇಳೆ ಬಂಧಿಸಿಲಾಗಿದ್ದು. ಈಗಾಗಲೇ ಬಂಧಿಸಲಾಗಿದ್ದ ನಾಲ್ವರಿಗೆ ನಕಲಿ ಆರ್ಟಿಪಿಸಿಆರ್ ವರದಿ ನೀಡಿದ್ದ ವ್ಯಕ್ತಿಯನ್ನೂ ಇಂದು ಬಂಧಿಸಲಾಗಿದೆ. ಇತರ ಮೂವರು ಮಹಿಳೆಯರೂ ನಕಲಿ ಆರ್ಟಿಸಿಪಿಆರ್ನೊಂದಿಗೆ ಆಗಮಿಸಿದ್ದು.
ಆದರೆ ಅವರಿಗೆ ಇದರ ಅರಿವಿಲ್ಲದೆ ತಮ್ಮ ಕುಟುಂಬದೊAದಿಗೆ ಬಂದಿದ್ದ ಕಾರಣ ಅವರನ್ನು ಇಬ್ಬರು ವಿದ್ಯಾಭ್ಯಸಕ್ಕೆ ಬಂದಿರುವುದಗಿ ಹೇಳಿಕೊಂಡಿದ್ದಾರೆ. ಬಂಧಿಸಿದಲ್ಪಟ್ಟಿರುವವರು ನೀಡಿರುವ ಆರ್ಟಿಪಿಸಿಆರ್ ವರದಿಗಳ ಕ್ಯೂರ್ ಕೋಟ್ ಸ್ಕಾö್ಯನ್ ಮಾಡಿದಾಗ ಅದು ತಾಳೆಯಾಗದಿರುವುದು, ದಿನಾಂಕದಲ್ಲಿ ವ್ಯತ್ಯಾಸಗಳ ತಾಂತ್ರಿಕ ಅಂಶಗಳ ಮೂಲಕ ನಕಲಿ ವರದಿಯನ್ನು ಗಡಿಗಳಲ್ಲಿ ಜಿಲ್ಲಾಡಳಿತ ನಯೋಜಿಸಿರುವ ಕಂದಾಯ ಆರೋಗ್ಯ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದಾರೆ.
Leave a Comment