ಕಾರವಾರ : ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆಗಳಲ್ಲಿ ವಿಶೇಷ ವಿಕಲಚೇತನರಿಗಾಗಿ ಯುಡಿಐಡಿ ಕಾರ್ಡ್ ವಿತರಣೆ ಹಾಗೂ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.
ಆ. 30ರಂದು ಭಟ್ಟಳ ತಾಲ್ಲೂಕು ಆಸ್ಪತ್ರೆ 31ರಂದು ಕುಮಟಾ ತಲ್ಲೂಕು ಆಸ್ಪತ್ರೆ, ಸೆಪ್ಟೆಂಬರ್ 1ರಂದು ಯಲ್ಲಾಪುರ 2 ರಂದು ಮುಂಡಗೋಡ, 3ರಂದು ಶಿರಸಿ, 4ರಂದು ಅಂಕೋಲಾ ಹಗೂ 4ರಂದು ಹಳಿಯಾಳ ತಲ್ಲೂಕು ಆಸ್ಪತ್ರೆಯಲ್ಲಿ ಯುಡಿಐಡಿ ಕಾರ್ಡ್ ವಿತರಣೆ ಮತ್ತು ವೈದ್ಯಕೀಯ ಶಿಬಿರ ನಡೆಯಲಿದೆ.
ಜೋಯಿಡಾ 66, ದಾಂಡೇಲಿ 35 ಹಗೂ ಹೊನ್ನವರ ತಾಲ್ಲೂಕಿನಲ್ಲಿ 113 ಜನರಿಗೆ ಈಗಾಗಲೇ ವೈದ್ಯಕೀಯ ತಪಾಸಣ ಶಿಬಿರವನ್ನು ನಡೆಸಲಾಗಿದ್ದು, ತಪಾಸಣೆಗೊಳಗೊಂಡವರೆಲ್ಲರ ಯುಡಿಐಡಿಕಾರ್ಡ್ ಗಳಿಗಾಗಿ ಪ್ರಿಂಟ್ಗಾಗಿ ಪ್ರಿಂಟಿAಗ್ ಏಜೆನ್ಸಿಯವರಿಗೆ ರವಾನಿಸಲಾಗಿದೆಯೆಂದು ಜಿಲ್ಲಾ ಆರೋಗ್ಯ ಮತ್ತು ಕುಂಟುಬ ಕಲ್ಯಾಣಾಧಿಕಾರಿ ಡಾ.ಶರದ್ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment