ಹೊನ್ನಾವರ: ಕೃಷಿ ಹಾಗೂ ಮೀನುಗಾರಿಕೆ ವಿಶೇಷ ಒತ್ತು ನೀಡುತ್ತೀದ್ದು, ಸರ್ಕಾರದಿಂದ ಸಿಗುವ ಸೌಲಭ್ಯ ಫಲಾನುಭವಿಗಳಿಗೆ ತರುವ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಸುನೀಲ ನಾಯ್ಕ ಹೇÉಳಿದರು.
ಶಾಸಕರ ಕಛೇರಿಯ ಮುಂಭಾಗದಲ್ಲಿ ಪರಿಶಿಷ್ಟ ವರ್ಗದ ಮೀನುಗಾರರಿಗೆ ಸರ್ಕಾರದಿಂದ ಮಂಜೂರಾದ ಮೀನುಗಾರಿಕಾ ಸಲಕರಣೆಯನ್ನು ವಿತರಿಸಿದ ಬಳಿಕ ಮಾತನಾಡಿ ಸರ್ಕಾರ ಮೀನುಗಾರರಿಗೆ ವಿಶೇÉಷ ಪ್ಯಾಕೇಜ್ ನೀಡುವ ಮೂಲಕ ಪೋತ್ಸಾಹ ನೀಡುತ್ತಿದೆ.

ಇಂದು ಮೀನುಗಾರರಿಗೆ ಬಲೆ, ಲೈಪ್ ಜಾಕೇಟ್ ಸೇರಿದಂತೆ ವಿವಿಧ ಸುರಕ್ಷೀತ ವಸ್ತುಗಳನ್ನು ನೀಡುತ್ತಿದೆ. ಹೊನ್ನಾವರದ 6 ನೆರೆಯ ಭಟ್ಕ¼ದÀ 16 ಮೀನುಗಾರರಿಗೆ ಈ ಸೌಲಭ್ಯ ವಿತರಿಸಲಾಗಿದೆ. ಮೀನುಗಾರರಿಗೆ ನೀಡಿದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ಫಲಾನುಭವಿಗಳು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
Leave a Comment