ಹೊನ್ನಾವರ ;ತಾಲೂಕಿನ ಕರ್ಕಿಯ ರೈಸ್ ಮಿಲ್ ಸಮೀಪ ರಸ್ತೆಯಲ್ಲಿದ್ದ ಗೋವುಗಳಿಗೆ ಸರ್ಕಾರಿ ಸಾರಿಗೆ ಬಸ್ ಗುದ್ದಿದ ಪರಿಣಾಮ ಜಾನುವಾರು ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.ಎರಡು ಗೋವುಗಳು ರಸ್ತೆ ದಾಟುವಾಗ ಸರ್ಕಾರಿ ಬಸ್ ವೇಗದಿಂದ ಬಂದ ಪರಿಣಾಮವಾಗಿ ನಿಯಂತ್ರಣಕ್ಕೆ ಬಾರದೆ ಗೋವುಗಳಿಗೆ ಗುದ್ದಿದೆ. ಪರಿಣಾಮವಾಗಿ ಒಂದು ಆಕಳು ಗಂಭೀರ ಗಾಯಗೊಂಡು ನಡೆಯಲಾರದ ಸ್ಥಿತಿಯಲ್ಲಿ ರಸ್ತೆಯ ಪಕ್ಕ ಬಿದ್ದಿತ್ತು.
ಯುವ ಬ್ರಿಗೇಡ್ ಕಾರ್ಯಕರ್ತ ರಂಜಿತಕುಮಾರ್ ಪಶು ವೈದ್ಯರಿಗೆ ಕರೆ ಮಾಡಿ ಗಾಯಗೊಂಡ ಹಸುವಿಗೆ ಚಿಕಿತ್ಸೆ ನೀಡಿದ್ದಾರೆ. ಒಂದು ಕಡೆ ಐ.ಆರ್. ಬಿ. ಯ ಅವೈಜ್ಞಾನಿಕ ಕಾಮಗಾರಿ, ಇನ್ನೊಂದೆಡೆ ರಸ್ತೆಯಲ್ಲಿ ಒಮ್ಮೆಲೆ ಬರುವ ಬೀಡಾಡಿ ದನಗಳು ಅನೇಕ ಅಪಘಾತಗಳಿಗೆ ಕಾರಣವಾಗಿದೆ.

ಈ ಹಿಂದೆ ರಾತ್ರಿ ವೇಳೆ ಅಪರಿಚಿತ ವಾಹನ ಬಡಿದು ರಸ್ತೆಯ ಅಂಚಿನಲ್ಲಿರುವ ನಾಲ್ಕೈದು ಗೋವುಗಳು ಸಾವನ್ನಪ್ಪಿದ್ದವು. ಇನ್ನೂ ಕೆಲವೊಮ್ಮೆ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವಾಗ ಒಮ್ಮೆಲೆ ವಾಹನಕ್ಕೆ ಅಡ್ಡಲಾಗುವ ಗೋವುಗಳನ್ನು ತಪ್ಪಿಸಲು ಪ್ರಯತ್ನಿಸಿ ತಮ್ಮ ಪ್ರಾಣವನ್ನೇ ಕಳೆದುಕೊಂಡ,ಗಂಭೀರ ಗಾಯಳುವಾದ ಘಟನೆಗಳು ಸಾಕಷ್ಟಿದೆ.ಗೋವಿನ ಮಾಲೀಕರು ತಮ್ಮ ಗೋವುಗಳು ಬಿಡಾಡಿಯಾಗದಂತೆ ಪ್ರತಿನಿತ್ಯ ನಿಗಾ ವಹಿಸಿ ಕೊಟ್ಟಿಗೆಗೆ ಕರೆದೊಯ್ದರೆ ಇಂತಹ ಅನಾಹುತಗಳು ಕಡಿಮೆಯಾಗಿ ಗೋವುಗಳ ಜೊತೆ ಮನುಷ್ಯರ ಪ್ರಾಣಕ್ಕೂ ಉಂಟಾಗುವ ಹಾನಿ ತಪ್ಪುತ್ತದೆ.
Leave a Comment