ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಎಆರ್ 156, ಬಿಎಸ್ ಎಫ್ 365, ಸಿಆರ್ ಪಿಎಫ್ 1537, ಐಟಿಬಿಪಿ 130 ಮತ್ತು ಎಸ್ ಎಸ್ ಬಿ ಯಲ್ಲಿ 257, ಖಾಲಿ ಇರುವ ಒಟ್ಟು 2439 ಪ್ಯಾರಾಮೆಡಿಕಲ್ ಸಿಬ್ಬಂದಿ ಹುದ್ದೆಗಳ ನೇಮಕಾತಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತರು ಸೆಪ್ಟೆಂಬರ್ 13 ರಿಂಸ 15ರವರೆಗೆ ನಡೆಯಲಿರುವ ವಾಕ್ – ಇನ್ ಸಂದರ್ಶನಕ್ಕೆ ಹಾಜರಾಗಬಹುದು.
ಅರ್ಹತಾ ಮಾನದಂಡ : ನಿವೃತ್ತ ಸಿಎಪಿಎಫ್ಗಳು ಮತ್ತು ಮಾಜಿ ಸಶಸ್ರö್ತ ಪಡೆ ಸಿಬ್ಬಂದಿಗಳು ಗುತ್ತಿಗೆ ಆಧಾರದ ಮೇಲೆ ವಿವಿಧ ಸಿಎಪಿಎಫ್ ಆಸ್ಪತ್ರೆಗಳಲ್ಲಿ ಅರೆವೈದ್ಯಕೀಯ ಸಿಬ್ಬಂದಿ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ. ಪ್ಯಾರಾಮೆಡಿಕಲ್ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು 62 ವರ್ಷ ಮೀರಿರಬಾರದು.
ಹೇಗೆ ಅರ್ಜಿ ಸಲ್ಲಿಸಬೇಕು : ಸಿಆರ್ಪಿಎಫ್ ನೇಮಕಾತಿ 2021ರ ಪ್ಯಾರಾಮೆಡಿಕಲ್ ಸಿಬ್ಬಂದಿ ಹುದ್ದೆಗಳಿಗೆ ಆಸಕ್ತಿಯುಳ್ಳ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ https://crpf.gov.in/ಭೇಟಿ ನೀಡಿ ಮತ್ತು ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಗತ್ಯ ದಾಖಲೆಗಳೊಂದಿಗೆ (ನಿವೃತ್ತಪ್ರಮಾಣಪತ್ರ/ ಪಿಪಿಒ, ಪದವಿ ವಯಸ್ಸಿನ ಪುರಾವೆ. ಅನುಭವ, ಇತ್ಯಾದಿ) ವಾಕ್ – ಇನ್ ಸಂದರ್ಶನಕ್ಕೆ ಅಭ್ಯರ್ಥಿಗಳು ಹಾಜರಾಗಬಹುದು
job info; Join our whatsapp group
Leave a Comment