ಆಗ್ರಾ : ತಾಜ್ ಮಹಲ್ ಪಶ್ಚಿಮ ಬಾಗಿಲಿನಲ್ಲಿ ಕೃಷ್ಣನ ವೇಷ ಧರಿಸಿ ಬಂದ ಸಂದರ್ಶಕನಿಗೆ ಪ್ರವೇಶ ನಿರಾಕರಿಸಿದ ಭಾರತೀಯ ಪ್ರಾಕ್ತನ ಇಲಾಖೆಯ ಸಿಬ್ಬಂದಿಯ ಅಮಾನತು ಮಾಡದಿದ್ದರೆ ತಾಜ್ ಮಹಲ್ ಬಾಗಿಲ ಬಂದ್ ಮಾಡುವುದಾಗಿ ರಾಷ್ಟಿçÃಯ ಹಿಂದೂ ಪರಿಷದ್ ಎಚ್ಚರಿಕೆ ನೀಡಿದೆ.
ಸಂದರ್ಶಕನಿಗೆ ಅಪಮಾನ ಮಾಡಿದ ಸಿಬ್ಬಂದಿಯನ್ನು ಅಮಾನತು ಮಾಡುವುದಕ್ಕೆ ಈ ಸಂಘಟನೆ 24 ಗಂಟೆ ಅಂತಿಮ ಗಡುವು ನೀಡಿದೆ. ಆದರೆ ಆಗ್ರಾ ವಲಯದ ಪ್ರಾಕ್ತನ ಇಲಾಖೆಯ ಸುಪರಿಂಟೆAಡೆAಟ್ ವಸಂತ್ ಕೆ. ಸ್ವರ್ಣಾಕರ್ ಹೇಳುವಂತೆ ಸಂರಕ್ಷಿತ ಸ್ಮಾರಕ ಸ್ಥಳದಲ್ಲಿ ಸೂಕ್ತ ಅನುಮತಿ ಪಡೆಯದೇ ಪ್ರಚಾರ ಮಾಡಬಾರದೆಂಬ ನಿಯಮವಿದೆ.
ಆದ್ದರಿಂದ ಈ ನಿಯಮಾವಳಿಯಂ ತೆರೇ ಕೃಷ್ಣವೇಷಧಾರಿ ಸಂದರ್ಶಕನಿಗೆ ಪ್ರವೇಶ ನಿರಾಕರಿಸಲಾಗಿದೆ. ಈ ಹಿಂದೆಯೂ ರಾಮದುಪ್ಪಟ್ಟ ಧರಿಸಿದವರನ್ನು ಹಲವರು ಸಂದರ್ಭಗಳಲ್ಲಿ ಪ್ರವೇಶ ನಿರಾಕರಿಸಲಾಗಿದೆ. ಶನಿವಾರ ಕೃಷ್ಣವೇಷಧಾರಿಗೆ ಪ್ರವೇಶ ನಿರಾಕರಿಸಿದ ನಂತರ ಸೋಮವಾರ ಆ ಬಗ್ಗೆ ಪ್ರತಿಭಟನೆಯೂ ನಡೆದಿದೆ.
Leave a Comment