ಹೊನ್ನಾವರ :ತಾಲೂಕಿನ ಮುಟ್ಟಾ ಗ್ರಾಮದ ಸರ್ವೇ ನಂ: 69/ಬ ಸ್ಥಳದಲ್ಲಿ ನವಗ್ರಾಮ ಆಶ್ರಯ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಮಂಜೂರಾದ ನಿವೇಶನದಲ್ಲಿ ಅನಧಿಕೃತವಾಗಿ ಇಟ್ಟಿದ್ದ ಗೂಡಂಗಡಿ ತೆರವು ಮಾಡಲು ಹೋಗಿದ್ದಾಗ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಭದ ೬ ಜನರ ಮೇಲೆ ಪ್ರಕರಣ ದಾಖಲಾಗಿದೆ.
ಹಾಡಗೇರಿಯಲ್ಲಿ ಮಾರುತಿ ಸುಬ್ರಾಯ ನಾಯ್ಕ ಎನ್ನುವವರು ಅನಧಿಕೃತವಾಗಿ ಬೇರೆಯವರಿಗೆ ಸರ್ಕಾರದಿಂದ ಮಂಜುರಾದ ಫಲಾನುಭವಿಗೆ ಮೋಸ ಮಾಡಿ ಗೂಡಂಗಡಿ ಇಟ್ಟಿದ್ದರು. ಹಲವು ಬಾರಿ ಸ್ಥಳಿಯ ಗ್ರಾಮ ಪಂಚಾಯತಿಗೆ ಹಾಗೂ ಅಧಿಕಾರಿಗಳಿಗೆ ಮನವಿ ನೀಡಿದರು ಪ್ರಯೋಜನವಾಗಿಲ್ಲ.
ಈ ಬಗ್ಗೆ ಕರವೇ ಗಜಸೇನೆ ತಹಶೀಲ್ದಾರರಿಗೆ ಮನವಿ ನೀಡಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದರು. ಈ ಹಿಂದೆಯೇ ಸರ್ವೆ ಕಾರ್ಯ ನಡೆಸಿ ನೊಟಿಸ್ ನೀಡಿದ್ದರು, ಅಂಗಡಿ ತೆರವು ಮಾಡಿರಲಿಲ್ಲ. ಪೋಲಿಸ್ ಬಂದವಸ್ತ್ ನಡುವೆ ತಹಶೀಲ್ದಾರ. ನಾಗರಾಜ ನಾಯ್ಕಡ್, ಸಿಪಿಐ ಶ್ರೀಧರ ಎಸ್.ಆರ್, ಹಾಗೂ ಕಂದಾಯ ಇಲಾಖೆ ಪಂಚಾಯತ ರಾಜ್ ಸಿಬ್ಬಂದಿಗಳು ತೆರಳಿ ತೆರವು ಮಾಡುತ್ತಿರುವಾಗ ಅಡ್ಡಿ ಪಡಿಸಿದ್ದರು. ಈ ಬಗ್ಗೆ ತಹಶೀಲ್ದಾರರು ಕರ್ತವ್ಯಕ್ಕೆ ಅಡ್ಡಿ ಪ್ರಕರಣವನ್ನು ಗ್ರಾಮದಮಾರುತಿ ಸುಬ್ರಾಯ ನಾಯ್ಕ, . ಶಂಕರ ಸುಬ್ರಾಯ ನಾಯ್ಕ,. ರವಿ ಮಾದೇವ ನಾಯ್ಕ, ನಿತ್ಯಾನಂದ ಈಶ್ವರ ನಾಯ್ಕ, ದಯಾನಂದ ಮಂಜುನಾಥ ನಾಯ್ಕ, ಸುಬ್ರಾಯ ತಿಮ್ಮಪ್ಪ ನಾಯ್ಕ ಇವರ ಮೇಲೆ ಪ್ರಕರಣ ದಾಖಲಿಸಿದ್ದರು.
ಆರೋಪಿತರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುವುದಾಗಿ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು., ತಾಲೂಕಾಡಳಿತದಿಂದ ಅನಧೀಕೃತ ಗೂಡಂಗಡಿಯನ್ನು ತೆರವುಗೊಳಿಸಿದ ಸ್ಥಳದಲ್ಲಿ ಪುನಃ ಅಕ್ರಮ ಪ್ರವೇಶ ಮಾಡಿ, ಅನಧೀಕೃತ ಶೆಡ್ ನಿರ್ಮಾಣ ಮಾಡಿ ಅಕ್ರಮವಾಗಿ ಗೂಡಂಗಡಿಯನ್ನು ಮತ್ತೆ ಇಟ್ಟಿದ್ದಾರೆ ಎಂದು ದೂರನ್ನು ದಾಖಲಿಸಿದ್ದರು. ದೂರಿನ ಹಿನ್ನಲೆ ಮತ್ತೆ ಅಧಿಕಾರಿಗಳು ತೆರಳಿ ತೆರವನ್ನು ಮಾಡಿದ್ದಾರೆ. ತಹಶೀಲ್ದಾರ ದಾಖಲಿಸಿದ ಪ್ರಕರಣ ಚುರುಕುಗೊಳಿಸಿ ಆರೋಪಿತರಾದ ಮಾರುತಿ ನಾಯ್ಕ, ಶಂಕರ ನಾಯ್ಕ,. ರವಿ ನಾಯ್ಕ ಇವರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ನಾಪತ್ತೆಯಾದವರ ಪತ್ತೆಗಾಗಿ ಕಾರ್ಯಚರಣೆ ಮುಂದುವರೆಸಿದ್ದಾರೆ.
Leave a Comment