ಕುಮಟಾ : ಗೋವಾದಲ್ಲಿ ದಾಖಲಾದ ಮಾದಕವಸ್ತು (ಡ್ರಗ್ಸ್) ಮಾರಾಟ ಪ್ರಕರಣಕ್ಕೆ ಸಂಬAಧಿಸಿದAತೆ ಕುಮಟಾ ಪಟ್ಟಣದ ಹೆರವಟ್ಟಾದ ಯುವಕವನ್ನು ಗೋವಾ ಪೋಲೀಸರು ರವಿವಾರ ರಾತ್ರಿ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಪಟ್ಟಣದ ಹೆರವಟ್ಟಾ ನಿವಾಸಿ ರಜತ್ ನಾಯಕ್ ಎಂಬಾತನನ್ನು ಗೋವಾದ ಎನ್ ಸಿಬಿ ಪೋಲಿಸರು ಬಂಧಿಸಿ ಗೋವಾಕ್ಕೆ ಕರೆದೊಯ್ದಿದ್ದಾರೆ. ಆರು ತಿಂಗಳ ಹಿಂದೆ ಗೋವಾದಲ್ಲಿ ದಾಖಲಾದ ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬAಧಿಸಿದAತೆ ಗೋವಾ ಪೊಲೀಸರು ಕೆಲ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದರು. ವಿಚಾರಣೆ ಸಂದರ್ಭದಲ್ಲಿ ಕುಮಟಾದ ರಜತ್ ಹೆಸರು ಕೂಡ ಬಹಿಂರಗಗೊAಡಿದೆ.

ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ರಜತ್ನ ಬಂಧನಕ್ಕೆ ಜಾಲ ಬೀಸಿದ್ದರು. ಆದರೆ ಈತ ತಲೆ ಮರೆಸಿಕೊಂಡಿದ್ದ. ಕೊನೆಗೆ ಮೊಬೈಲ್ ಟ್ರಾಕ್ಯ್ ಮಾಡಿದ್ದಾಗ ಕುಮಟಾದಲ್ಲಿರುವುದು ತಿಳಿದು ಬಂದಿದೆ. ಎರಡು ದಿನಗಳ ಹಿಂದೆಯೇ ಕುಮಟಾಕ್ಕೆ ಆಗಮಿಸಿದ ಗೋವಾದ ಪೊಲೀಸರು ಇಲ್ಲಿನ ಕುಮಟಾ ಪೊಲೀಸರು ಸಹಾಯ ಪಡೆದು
ಆರೋಪಿ ರಜತ್ ನಾಯಕನನ್ನು ಬಂಧಿಸಲು ಶೋಧ ಕಾರ್ಯ ನಡೆಸಿದ್ದರು. ಕುಮಟಾದ ರೈಲು ನಿಲ್ದಾಣದಲ್ಲಿ ರವಿವರ ರಾತ್ರಿ ರಜತ್ ಇರುವ ಖಚಿತ ಮಾಹಿತಿ ಪಡೆದ ಪೊಲೀಸರು ತಕ್ಷಣ ರೈಲು ನಿಲ್ದಾಣಕ್ಕೆ ತೆರಳಿ ಆರೋಪಿ ರಜತ್ನ್ನು ಬಂಧಿಸಿ, ವಿಚಾರಣೆಗಾಗಿ ಗೋವಾಕ್ಕೆ ಕರೆದೊಯ್ದಿದ್ದಾರೆ.
Leave a Comment