ಶಿರಸಿ : ಕಟ್ಟಡ ನಿರ್ಮಿಸಿದ್ದ ಗುತ್ತಿಗೆದಾರನಿಗೆ ಬಿಲ್ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ನಗರದ ಜಿಲ್ಲಾ ಪಂಜಾಯಿತಿ ಕಾರ್ಯಾಲಯದಲ್ಲಿ ಎಸಿಬಿ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ನಡೆದಿದೆ.

ಪ್ರಥಮ ದರ್ಚೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯದುನಂದನ್ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸದಲ್ಲಿದ್ದ ಸುಬ್ರಹ್ಮಣ ಬಂಧಿತ ಆರೋಪಿಗಳು. ಇವರನ್ನು ಶಿವಮೊಗ್ಗದ ಸುನೀಲ್ ಎಂಬ ಗುತ್ತಿಗೆದಾರನಿಂದ 12 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ.
ಗುತ್ತಿಗೆದಾರನಿಗೆ 4 ಲಕ್ಷ ರೂ.ಗಳ ಬಿಲ್ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆದಿದೆ. ಘಡನೆಯಲ್ಲಿ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಎಂಜಿನಿಯರ್ ಕೈವಾಡ ಇರಬಹುದು ಎಂಬ ಶಂಕೆಯನ್ನು ಎಸಿಬಿ ವ್ಯಕ್ತಪಡಿಸಿದ್ದು, ಅವರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಡಿಎಸ್ಪಿ ವೀರೇಶ ನೇತೃತ್ವದಲ್ಲಿ ದಾಳಿ ನಡೆದಿದೆ.
Leave a Comment