ನವದೆಹಲಿ: ದೇವಸ್ಥಾನಕ್ಕೆ ಸೇರಿದ ಭೂಮಿಯ ಮಾಲೀಕತ್ವದ ವಿಚಾರಕ್ಕೆಬಂದಾಗ ಭೂ ದಾಖಲೆಗಳಲ್ಲಿ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡಿರುವದೇವರ ಹೆಸರು ಮಾತ್ರ ಉಲ್ಲೇಖಕ್ಕೆ ಅರ್ಹ, ಅರ್ಚಕರು ಪೂಜೆ ಮಾಡಲುಮಾತ್ರ ಸೀಮಿತವಾಗಿರುತ್ತಾರೆ. ದೇವರ ಆಸ್ತಿಯನ್ನು ನಿರ್ವಹಣೆ ಮಾಡುವಖಾತರಿದಾರರಾಗಿ ಮಾತ್ರ ಪೂಜಾರಿ/ಅರ್ಚಕರು ಇರಲಿದ್ದಾರೆ
ಎಂದುಸೋಮವಾರ ಸುಪ್ರೀಂ ಕೋರ್ಟ್ ತೀಪು ನೀಡಿದೆ.
.ನ್ಯಾಯಿಕ ವ್ಯಕ್ತಿಯಾಗಿ (ಜ್ಯೂರಿಸ್ಟಿಕ್ ಪರ್ಸನ್) ದೇವರೇ ಭೂಮಿಯಮಾಲೀಕನಾಗಿರುವಾಗ ಭೂ ದಾಖಲೆಗಳಲ್ಲಿ ಪೂಜಾರಿ ಅಥವಾವ್ಯವಸ್ಥಾಪಕರ ಹೆಸರನ್ನು ಉಲ್ಲೇಖಿಸಲೇಬೇಕು ಎಂಬ ಅಗತ್ಯವಿಲ್ಲ ಎಂದುನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಮತ್ತು ಎ. ಎಸ್. ಬೋಪಣ್ಣಅವರಿದ್ದ ವಿಭಾಗೀಯ ಪೀಠ ಹೇಳಿದೆ

ಎಂದು ಎಂದು ಬಾರ್ ಎಂಡ್ಬೆಂಚ್ ವರದಿ ಮಾಡಿದೆ. ವರದಿ ಪ್ರಕಾರ, ನ್ಯಾಯಿಕ ವ್ಯಕ್ತಿಯಾಗಿ ದೇವರೇಭೂಮಿಯ ಮಾಲೀಕನಾಗಿರುವುದರಿಂದ ಭೂ ದಾಖಲೆಗಳಲ್ಲಿ ಮಾಲೀಕರಕಲಂನಲ್ಲಿ ದೇವರ ಹೆಸರನ್ನು ಮಾತ್ರ ಉಲ್ಲೇಖಿಸಿದರೆ ಸಾಕು. ದೇವರೇಭೂಮಿಯ ಸ್ವಾಮ್ಯ ಹೊಂದಿರುವುದರಿAದ ದೇವರ ಸೇವಕರು ಅಥವಾವ್ಯವಸ್ಥಾಪಕರು ದೇವರ ಪರವಾಗಿ ಅದನ್ನು ಅನುಭೋಗಿಸುತ್ತಾರೆ.ಹೀಗಾಗಿ, ಅನುಭೋಗಿಸುವ ಪಟ್ಟಿಯಲ್ಲಿ ವ್ಯವಸ್ಥಾಪಕರು ಅಥವಾಪೂಜಾರಿಯ ಹೆಸರನ್ನು ಉಲ್ಲೇಖಿಸುವ ಅಗತ್ಯವಿಲ್ಲ” ಎಂದು ಪೀಠವುತೀರ್ಪಿನಲ್ಲಿ ಹೇಳಿದೆ.
ಮಧ್ಯಪ್ರದೇಶ ಕಂದಾಯ ಕಾನೂನು ಸಂಹಿತೆ1959ರ ಅಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಸುತ್ತೋಲೆಗಳನ್ನುವಜಾಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರಸಲ್ಲಿಸಿದ್ದ ವಿಶೇಷ ಮೇಲ್ಮನವಿಗಳ ವಿಚಾರಣೆಯನ್ನು ಪೀಠ ನಡೆಸಿತು.ಕಾನೂನುಬಾಹಿರವಾಗಿ ಪೂಜಾರಿಗಳು ದೇವಸ್ಥಾನದ ಆಸ್ತಿಯನ್ನುಮಾರಾಟ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ದೇವಸ್ಥಾನದ ಭೂದಾಖಲೆಯಲ್ಲಿ ಪೂಜಾರಿಗಳ ಹೆಸರನ್ನು ತೆಗೆದು ಹಾಕುವ ಸಂಬAಧಸರ್ಕಾರವು ಕಾರ್ಯಕಾರಿ ಸೂಚನೆಗಳನ್ನು ಒಳಗೊಂಡ ಸುತ್ತೋಲೆಹೊರಡಿಸಿತ್ತು.
ಪ್ರಕರಣದ ನ್ಯಾಯ ನಿರ್ಣಯದ ವೇಳೆ ಪೀಠವು ಈಚೆಗೆ ಭಾರಿ ಸಂಚಲನಮೂಡಿಸಿದ್ದ ಅಯೋಧ್ಯಾ ಪ್ರಕರಣ ಎಂದೇ ಖ್ಯಾತಿ ಪಡೆದಿದ್ದ ಎಂ ಸಿದ್ಧಿಕ್ಅವರ ಕಾನೂನು ಪ್ರತಿನಿಧಿಗಳು ವರ್ಸಸ್ ಮಹಾಂತ್ ಸುರೇಶ್ ದಾಸ್ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನುಹಾಗೂ ಪಂಚಮ್ ಸಿಂಗ್ ವರ್ಸಸ್ ರಾಮಕೃಷ್ಣದಾಸ್ ಗುರು ದಾಸ್ಮತ್ತು ಇತರರು ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ತೀಪುಗಳನ್ನುಉಲ್ಲೇಖಿಸಿದೆ ಎಂದು ವರದಿ ಹೇಳಿದೆ.
Leave a Comment