ಹೊನ್ನಾವರ; ಹುಬ್ಬಳ್ಳಿಯಲ್ಲಿ ನಡೆದ ರೋಟರಿಕ್ಲಬ್ ಕಾರ್ಯಕ್ರಮದಲ್ಲಿ 2019-20 ನೇ ಸಾಲಿನ ಪ್ರಶಸ್ತಿಗೆ ಹೊನ್ನಾವರ ರೋಟರಿ ಕ್ಲಬ್ ಲಭಿಸಿದೆ. ಈ ಅವಧಿಯ ಸೇವಾ ಚಟುವಟಿಕೆಗಳಿಗಾಗಿ ನಾಲ್ಕು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಅಂದಿನ ಅವಧಿಯ ರೋಟರಿ ಕ್ಲಬ್ ನ ಅಸಿಸ್ಟಂಟ್ ಗವರ್ನರ್ ಆದ ಜಿ.ಎಸ್. ಹೆಗಡೆ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡ ಚಟುವಟಿಕೆಗಳಿಗೆ ಕ್ಲಬ್ ಗೆ “ಸಮುದಾಯ ಸೇವೆಯಲ್ಲಿ ಅತ್ಯುತ್ತಮ” ಮತ್ತು “ಯುವಜನ ಸೇವೆಯಲ್ಲಿ ಅತ್ಯುತ್ತಮ” ಪ್ರಶಸ್ತಿಗಳನ್ನು ನೀಡಲಾಗಿದೆ.

ಆಗಿನ ಅಧ್ಯಕ್ಷ ದಿನೇಶ ಕಾಮತ ಅವರಿಗೆ ” ಅತ್ಯುತ್ತಮ ಅಧ್ಯಕ್ಷ” ಮತ್ತು ಕಾರ್ಯದರ್ಶಿಯಾದ ಎಸ್ ಎನ್ ಹೆಗಡೆ ಅವರಿಗೆ ” ಅತ್ಯುತ್ತಮ ಕಾರ್ಯದರ್ಶಿ ” ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಹೊನ್ನಾವರ ರೋಟರಿ ಕ್ಲಬ್ ಗೆ ಬಂದಿರುವ ಪ್ರಶಸ್ತಿಗೆ ಕಾರಣಿಕರ್ತರಾದ ಅಂದಿನ ಅವಧಿಪದಾಧಿಕಾರಿಗಳಿಗೆ ಪ್ರಸುತ್ತ ರೋಟರಿ ಅಧ್ಯಕ್ಷರಾದ. ಸ್ಟೀಫನ್ ರೊಡ್ರಿಗಿಸ್ ಅಭಿನಂದಸಿ ಗೌರವಿಸಿದ್ದಾರೆ.
Leave a Comment