ಶಿರಸಿ : ಶ್ರೀಮತಿ ವಿಜಯನಳಿನಿ ರಮೇಶ ಹಾಗೂ ಮಕ್ಕಳು ಮತ್ತು ನಯನ ಪೌಂಡೇಶನ್ ಸಹಯೋಗದಲ್ಲಿ ಶಿರಸಿಯ ನಯನ ಸಭಾಂಗಣ ದಲ್ಲಿ ಸೆ.12 ರಂದು ಮಧ್ಯಾಹ್ನ 3 ಗಂಟೆಗೆ ಎಂ. ರಮೇಶ ಪ್ರಶಸ್ತಿ ಉದ್ಘಾಟನೆ ಮತ್ತು ಪ್ರಥಮ ಪ್ರಶಸ್ತಿ ಪ್ರದಾನ ಸಮಾಂರಭವನ್ನು ಆಯೋಜಿಸಲಾಗಿದೆ.

ಶ್ರೀಮತಿ ವಿಜಯನಳಿನಿಯರಿಂದ ಸ್ಥಾಪಿಸಲ್ಟಟ್ಟಿರುವ ಎಂ ರಮೇಶ ಪ್ರಶಸ್ತಿಯ ಸಾಹಿತ್ಯ ನಾಟಕ, ಯಕ್ಷಗಾನ ಕ್ಷೇತ್ರಗಳ ಸಾಧಕರಿಗಾಗಿ ಮೀಸಲಾಗಿದೆ. ಇದು 25,000 ರೂಪಾಯಿಗಳ ಗೌರವಧನ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ.
ಸಾಧಕರ ಆಯ್ಕೆಗೆ ಪರಿಣಿತರ ಸಮೀತಿಯಿದ್ದು, ಈ ವರ್ಷದ ಪ್ರಶಸ್ತಿಯನ್ನು ಯಕ್ಷಗಾನ ರಂಗದಲ್ಲಿ ವಿಶೇಷ ಸಾಧನೆ ತೋರುತ್ತಿರುವ ಶ್ರೀಧರ ಹೆಗಡೆ ಚಪ್ಪರಮನೆ ಇವರಿಗೆ ಪ್ರದಾನ ಮಾಡಲಾಗುತ್ತಿದೆ.
ಸಮಾಂರಭದಲ್ಲಿ ಪ್ರಮೋದ ಹೆಗಡೆ ಯಲ್ಲಾಪುರ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ನೇತ್ರತಜ್ಞರಾದ ಶಿವರಾಮ ಕೆ.ವಿ ವಹಿಸಲಿದ್ದಾರೆ.
ವಿ.ಪಿ ಹೆಗಡೆ ವೈಶಾಲಿ ಮತ್ತು ಜಯಪ್ರಕಾಶ ಹೆಗಡೆ ಬಸ್ತಿಬೈಲು ಇವರಗಳು ದಿವಂಗತ ಎಂ. ರಮೇಶರ ಕುರಿತು ಮಾತನಾಡಲಿದ್ದಾರೆ. ಹಾಗೂ ಪತ್ರಕರ್ತ ಅಶೋಕ ಹಾಸ್ಯಗಾರ ಅವರು ಪ್ರಶಸ್ತಿ ಪುರಸ್ಕೃತರ ಕುರಿತ ಮಾತನಾಡುತ್ತಾರೆ.
Leave a Comment