ಭಟ್ಕಳ: ಚಲಿಸುತ್ತಿದ್ದ ರೈಲೊಂದು ವ್ಯಕ್ತಿಯೋರ್ವರಿಗೆ ಬಡಿದು ಸಾವನ್ನಪ್ಪಿದ ಘಟನೆ ತಾಲೂಕಿನ ಬಸ್ತಿಯಲ್ಲಿನ ಜ್ಯೋತಿ ವೈನ್ ಸಾಪ್ ಸಮೀಪದ ರೈಲ್ವೆ ಹಳಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ನಾರಾಯಣ ಬಾಕಡ ಬಸ್ತಿಯ ಬಾಕಡ ಕೇರಿ ನಿವಾಸಿ ಎಂದು ತಿಳಿದು ಬಂದಿದ್ದು ಈತ ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಈತ ಮನೆಯಲ್ಲಿ ಬಸ್ತಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವನು ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯ ಅವಧಿಯಲ್ಲಿ ಬಸ್ತಿಯಲ್ಲಿರುವ ಜ್ಯೋತಿ ವೈನ್ ಸಾಪ್ ಸಮೀಪದಲ್ಲಿನ ರೈಲ್ವೆ ಹಳಿಯಲ್ಲಿ ಚಲಿಸುತ್ತಿದ್ದ ಯಾವುದೋ ರೈಲು ಬಡಿದು ಬಾರಿ ಸ್ವರೂಪದ ಗಾಯದೊಂದಿಗೆ ಮೃತ ಪಟ್ಟಿದ್ದಾರೆ
ಈ ಕುರಿತು ಮುರುಡೇಶ್ವ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Leave a Comment