ಭಟ್ಕಳ: ಕರ್ತವ್ಯದಲ್ಲಿದ್ದ ಮುರುಡೇಶ್ವರ ಮಾವಳ್ಳಿ-2ರ ಗ್ರಾಮ ಲೆಕ್ಕಾಧಿಕಾರಿ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಬಗ್ಗೆ ಮುರುಡೇಶ್ವ ಪೋಲಿಸ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ನಡೆಸಿರುವ ಆರೋಪಿಯನ್ನು ಸಚಿನ ನಾಯ್ಕ ಎಂದು ತಿಳಿದು ಬಂದಿದೆ. ಮುರುಡೇಶ್ವರ ಮೀನು ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದು ಕೋವಿಡ್ ನಿಯಮ ಪಾಲಿಸುತ್ತಿಲ್ಲ ಎಂದು ದೂರು ಬಂದ ಕಾರಣಗ್ರಾಮ ಲೆಕ್ಕಾಧಿಕಾರಿ ಚರಣ ಕಂದಾಯ ನಿರೀಕ್ಷಕರನ್ನು ಕರೆದುಕೊಂಡು ದೇವಸ್ಥಾನ ಪ್ರವೇಶ ದ್ವಾರದ ಎಡ ಬದಿಯಲ್ಲಿ ಮೋಟಾರ್ ಸೈಕಲ್ ನಿಲ್ಲಿಸಿದಾಗ ಆರೋಪಿಯಾದ ಸಚಿನ್ ಮೋಟಾರ್ ಸೈಕಲ್ ಅಲ್ಲಿ ಪಾರ್ಕ್ ಮಾಡಿದರೆ ರಸ್ತೆ ಜಾಮ್ ಅಗುತ್ತದೆ.
ಬೇರೆ ಕಡೆಯಲ್ಲಿ ಪಾರ್ಕ್ ಮಾಡಿ ಎಂದು ಏರು ಧ್ವನಿಯಲ್ಲಿ ಗದರಿಸಿ ವಾಗ್ವಾದಕ್ಕೆ ಇಳಿದಾಗ ಆರೋಪಿ ಜೊತೆಯಲ್ಲಿ ದ್ದವರು ಅವರು ಗ್ರಾಮಾಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಎಂದು ತಿಳಿಸಿದರು. ನನಗೆ ಯಾವ ಅಧಿಕಾರಿಯ ಭಯವಿಲ್ಲವೆಂದನು ವಾಗ್ವಾದಕ್ಕೆ ಇಳಿಸಿದ್ದಾನೆ .
ನಂತರ ಗ್ರಾಮಾಲೆಕ್ಕಾಧಿಕಾರಿ ಮತ್ತು ಕಂದಾಯ ನಿರೀಕ್ಷಕರು ಮೀನು ಮಾರುಕಟ್ಟೆಗೆ ಹೋಗಿ ಅಲ್ಲಿ ಸೇರಿದ ಜನರಿಗೆ ಕೋವಿಡ್ ನಿಯಮ ತಿಳಿಸಿ ಅಂತರ ಕಾಯ್ದುಕೊಳ್ಳಲು ಹೇಳಿ ಮೋಟಾರ್ ಸೈಕಲ್ ಮೇಲೆ ಹೊರಡಲು ಸಿದ್ದವಾದ ವೇಳೆ ಆರೋಪಿ ಮೋಟಾರ್ ಸೈಕಲ್ ತಡೆಗಟ್ಟಿ ಗ್ರಾಮ ಲೆಕ್ಕಾಧಿಕಾರಿ ಚರಣರವರ ಕೆನ್ನೆಗೆ ಹೊಡೆದು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆ.
ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment