ಹೊನ್ನಾವರ: ತಾಲೂಕ ಆಸ್ಪತ್ರೆಯ ನೂತನ ಡಯಾಲಿಸಿಸ್ ಘಟಕಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು. ಶಾಸಕ ದಿನಕರ ಶೆಟ್ಟಿ ಮಾತನಾಡಿ ಮಾಧ್ಯಮಗಳಲ್ಲಿ ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿಂದೆ ಕೆಟ್ಟು ಹೊದ ಡಯಾಲಿಸಿಸ್ ಘಟಕ ಸಿದ್ದವಾಗಿದೆ.
ಬಿಜೆಪಿ ಮಂಡಲ ಹಾಗೂ ನಮಸ್ಕಾರ ಸಂಘಟನೆ, ಅಡಿಕೆ ವ್ಯಾಪಾರಸ್ಥರ ಸಂಘದ ಸಹಯೋಗದೊಂದಿಗೆ ಹೊಸ ಡಯಾಲಿಸಿಸ್ ಯಂತ್ರ ಬಂದಿದೆ. ಒಂದು ತಿಂಗಳೊಳಗೆ ಮತ್ತೊಂದು ಯಂತ್ರ ಬರಲಿದೆ.ಇಲ್ಲಿಯ ಸಿಬ್ಬಂದಿಗಳ ವೇತನ ಸಮಸ್ಯೆ ಬಗ್ಗೆ ಡಿ.ಎಚ್.ಓ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುವತ್ತ ಗಮನಹರಿಸಲಾಗುವುದು.

ನನ್ನ ಅಧಿಕಾರ ಇರುವವರೆಗೂ ಡಯಾಲಿಸಿಸ್ ಸ್ಥಗಿತಗೊಳ್ಳಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.ಪಟ್ಟಣದ ರಸ್ತೆ ದುಸ್ಥಿತಿ ಬಗ್ಗೆ ಮಾತನಾಡಿ ನನ್ನ ಅಧಿಕಾರಾವಧಿಯಲ್ಲಿ ಈಗಾಗಲೇ ಮೂರು ಕೋಟಿ ವೆಚ್ಚದ ರಸ್ತೆ ನಿರ್ಮಾಣವಾಗಿದೆ. ಕೋವಿಡ್ ಸಂಕಷ್ಟದಲ್ಲಿ ಹಣ ಬಿಡುಗಡೆಯಾಗಿಲ್ಲ.
ಮುಂಬರುವ ದಿನದಲ್ಲಿ ೫ ಕೋಟಿ ಅನುದಾನದ ಮೂಲಕ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುದಾಗಿ ಭರವಸೆ ನೀಡಿದರು.ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಪ್ರಾಸ್ತವಿಕವಾಗಿ ಮಾತನಾಡಿ ಬಹುಮುಖ್ಯವಾದ ಡಯಾಲಿಸಿಸ್ ಘಟಕ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.
ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ವೇತನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.ಪಟ್ಟಣ ಪಂಚಾಯತಿ ಅಧ್ಯಕ್ಷ ಶಿವರಾಜ ಮೇಸ್ತ, ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ, ಪಟ್ಟಣ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕಾಮತ್ ಬಿಜೆಪಿ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.
Leave a Comment