ಬೆಂಗಳೂರು :ಗ್ಯಾಸ್ ಸೋರಿಕೆಯಿಂದಾಗಿ ಅಪಾರ್ಟ್ಮೆಂಟ್ ನಲ್ಲಿನ ಮನೆಗೆ ಬೆಂಕಿ ಹೊತ್ತಿಕೊಂಡು ತಾಯಿ ಮಗಳು ಸಜೀವ ದಹನವಾಗಿದ್ದಾರೆ.
ದೇವರಚಿಕ್ಕನಹಳ್ಳಿಯ ಆಶ್ರಿತ ಅಪಾರ್ಟ್ಮೆಂಟಿನ ಮೂರನೇ ಮಹಡಿಯ 210 ನೇ ಫ್ಲಾಟಿನಲ್ಲಿ ವಾಸವಾಗಿದ್ದ ತಾಯಿ ಲಕ್ಷಿö್ಮದೇವಿ(82) ಹಾಗೂ ಮಗಳು ಭಾಗ್ಯರೇಖಾ (59) ದುರ್ಘಟನೆಯಲ್ಲಿ ಸುಟ್ಟು ಕರಕಲಾಗಿದ್ದಾರೆ.

ಸಾಯಂಕಾಲ 4.30 ರ ಸುಮಾರಿಗೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ತಗುಲಿಕೊಂಡಿದೆ. ಎಲ್ಲ ಬಾಗಿಲುಗಳನ್ನು ಹಾಕಿ ಮಲಗಿಕೊಂಡಿದ್ದ ತಾಯಿ ಮಗಳಿಗೆ ಮೊದಲಿಗೆ ಏನೂ ಗೋತ್ತಾಗಲಿಲ್ಲ. ನಂತರ ಬೆಂಕಿ ಕೆನ್ನಾಲಿಗೆ ಗಳು ಎಲ್ಲಡೆ ಪಸರಿಸಿದಾಗ ಹೊರಗೆ ಬರಲು ಯತ್ನಿಸಿದ್ದಾರೆ. ಆದರೆ ಒಳಗಿನಿಂದ ಚಿಲಕ ಹಾಕಿಕೊಂಡಿದ್ದರಿAದ ಗಾಬರಿಯಲ್ಲಿ ಅದನ್ನು ತೆಗಯಲು ಗೊತ್ತಾಗಲಿಲ್ಲ. ಅಷ್ಟರಲ್ಲಿ ಬೆಂಕಿ ಒಳಗಡೆಯೂ ಅವರಿಸಿದೆ.
ಬಾಲ್ಕನಿಯಲ್ಲಿ ಸೊಳ್ಳೆಕಾಟ ತಡೆಯಲು ಹಾಕಿದ್ದ ಮೆಶ್ಗೆ ಬೆಂಕಿ ಹೊತ್ತಿಕೊಂಡು ಅದು ಪಕ್ಕದ ಫ್ಲಾಟಿಗೂ ತಗುಲಿದೆ. ಕಿಟಕಿಯಿಂದ ತಾಯಿ ಮಗಳು ಇಬ್ಬರೂ ಕೈ ಮಾಡುತ್ತಿದ್ದರು. ನೋಡ ನೋಡುತ್ತಿದ್ದಂತೆ ಅವರಿಗೂ ಬೆಂಕಿ ತಗುಲಿ ಸ್ವಲ್ಪಹೊತ್ತಿನ ನಂತರ ಹೊರಗಡೆ ಕೈ ಮಾಡುವುದೂ ನಿಂತು ಹೊಗಿದೆ. ಅಷ್ಟರಲ್ಲಿ ಪಕ್ಕದ ಮನೆಗೂ ಬೆಂಕಿ ತಗುಲಿದೆ.
ಆಮನೆಯಲ್ಲಿದ್ದವರು ಹೊರಗಡೆ ಓಡಿಬಂದಿದಾರೆ. ಈ ಸಂದರ್ಭದಲ್ಲಿ ಅವರಿಗೆ ಚಿಕ್ಕಪಟ್ಟು ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪಕ್ಕದಲ್ಲಿದ್ದ ಇನ್ನೊಂದು ಮನೆಗೆ ಬೆಂಕಿ ತಗುಲಿದೆಆದರೆ ಆಮನೆಯಲ್ಲಿ ಯಾರೂ ಇರಲಿಲ್ಲ ಒಳಗಿರುವ ವಸ್ತುಗಳಿಗೆ ಬೆಂಕಿ ತಗುಲಿತ್ತು.
ಹೀಗೆ ಮನೆಯಿಂದ ಮನೆಗೆ ಬೆಂಕಿ ಹೊತ್ತಿ ಕೆನ್ನಾಲಿಗೆಗಳು ಹೊರ ಚಾಚಿದ್ದವು. ದಟ್ಟವಾದ ಹೊಗೆ ಆವರಿಸಿದ್ದರಿಂದ ದಾರಿಹೋಕರು ಕೂಡಲೇ ಅಗ್ನಿ ಶಾಮಕದಳದ ವರಿಗೆ ಕರೆ ಮಾಡಿದ್ದರು. ಮಹಡಿಯ ಕೆಳಮನೆಯವರು ಬೆಂಕಿಯನ್ನು ನೋಡಿ ಕಿರುಚಾಡುತ್ತಿದ್ದರು.
ಅಪಾರ್ಟ್ಮೆಂಟಿನ ಅರ್ಧಕ್ಕರ್ಧ ಜನರು ಹೊರಗಡೆ ಓಡಿಬಂದರು. ನಂತರ ಅಗ್ನಿಶಾಮಕದಳದ ವಾಹನಗಳು ಒಂದರೂ ಬೆಂಕಿಯ ಕೆನ್ನಾಲಿಗೆಗಳ ಆಟ ನಿಂತಿರಲಿಲ್ಲ. ಕಾರ್ಯಾಚರಣೆ ಮುಂದುವರೆದಿದೆ.
Leave a Comment