ಮಂಗಳೂರು : ದುಬೈಯಿಂದ ಆಗಮಿಸಿದ ಕಾಸರಗೋಡು ಮೂಲದ ಪ್ರಯಣಿಕನೊಬ್ಬವನ್ನು ವಶಕ್ಕೆ ಪಡೆದ ಮಂಳೂರು ಅಂತರಾಷ್ಟಿçÃಯ ವಿಮಾನ ನಿಲ್ದಾಣದ ಕಸ್ಟಮ್ನ್ ಅಧಿಕಾರಿಗಳು ಆತನಿಂದ 418 ಗ್ರಾಂ. ತೂಕದ 19,89,680 ರೂ ಚಿನ್ನ ವಶಪಡಿಸಿಕೊಂಡಿದ್ದಾರೆ. ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನದ ಮೂಲಕ ಆಗಮಿಸಿದ ಈತ ಪೇಸ್ಟ್ ಹಾಗೂ ಕ್ಯಾಪ್ಸೂಲ್ ರೂಪದಲ್ಲಿ ಪ್ಯಾಕ್ ಮಾಡಿ ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ.
ಮಂಗಳೂರು ಅಂತಾ ರಾಷ್ಟಿçÃಯ ವಿಮನ ನಿಲ್ದಾಣ ದಲ್ಲಿ ಕಳೆದ ಮೂರು ದಿನಗಳ ಅಂತರದಲ್ಲಿ ಅಕ್ರಮ ಚಿನ್ನ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಭAಧಿಸಿ ಸುಮಾರು 70 ಲಕ್ಷ ಮೌಲ್ಯದ ಚಿನ್ನವನ್ನು ಕಸ್ಟಮ್ನ್ ಅಧಿಕಾರಿಗಳು ವಶಪಡಿಸಿ ಕೊಂಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
13 ಲಕ್ಷ ಮೌಲ್ಯದ ಚಿನ್ನ ವಶ : ಇನ್ನೊಂದು ಪ್ರಕರಣದಲ್ಲಿ ದುಬೈಯಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಮೂಲಕ ಆಗಮಿಸಿದ ಕಾಸರಗೋಡಿನ ಪ್ರಯಾಣಿಕನೊಬ್ಬನನ್ನು ವಶಕ್ಕೆ ಪಡೆದು ಆತನಿಂದ 293 ಗ್ರಾಂ ತೂಕದ 24 ಕ್ಯಾರೆಟ್ ಪರಿಶುದ್ಧವಾಗಿರುವ 13,88,823 ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.
ಪ್ರಯಾಣಿಕ ಚಿನ್ನವನ್ನು ಕಪ್ಪು ಬಣ್ಣದ ಬ್ಲಾಂಕೆಟ್ನೊಳಗಿಟ್ಟು ಅಕ್ರಮವಾಗಿ ಸಾಗಾಟ ಮಾಡಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
Leave a Comment