ವಾಷಿಂಗ್ಟನ್ : ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ನಿರ್ದೇಶಕ ವಿಲಿಯಂ ಬರ್ನ್ಸ ಅವರ ಭಾರತ ಪ್ರವಾಸದ ಜೊತೆ ಅವರರೊಂದಿಗೆ ಬಂದಿದ್ದ ಅಧಿಕಾರಿಗೆ ವಿಚಿತ್ರವಾದ ಹವಾನಾ ಸಿಂಡ್ರೋಮ್ ಲಕ್ಷಣಗಳು ಕಾಣಿಸಿಕೊಂಡಿವೆ.
ಅಧಿಕಾರಿಯ ಹೆಸರನ್ನು ಬಹಿರಂಗಗೊಳಿಸದೆ, ಅಮೆರಿಕದ ಮಾಧ್ಯಮಗಳು ಇದನ್ನು ವರದಿ ಮಾಡಿವೆ. ಈ ಅಧಿಕರಿಯನ್ನು ಯಾರಾದರೂ ಗುಪಡಿಸಿದ್ದಾರಾ ಎನ್ನುವುದರ ಕುರಿತು ಇನ್ನೂ ತನಿಖೆ ನಡೆಯುತ್ತಿದೆ.
ದೇಶದ ಗುಪ್ತಚರ ಸಂಸ್ಥೆಗೆ ಕೆಲಸ ಮಾಡುತ್ತಿರುವವರು ಸೇರಿದಂತೆ ದೇಶದಲ್ಲಿ ಯಾರು ಸುರಕ್ಷಿತವಲ್ಲ. ಎನ್ನುವ ಸಂದೇಶವನ್ನು ಬರ್ನ್ಸ್ ಅವರಿಗೆ ಈ ಮೂಲಕ ನೀಡಾಲಗಿದೆ. ಎನ್ನಲಾಗುತ್ತಿದೆ.
ಇದು ಭಾರತದ ಪ್ರವಾಸಕ್ಕೆ ಹೋದ ಅಧಿಕಾರಿಗೇ ಆಯಿತೇ ಎನ್ನುವುದನ್ನು ಸಿಐಎ ವಕ್ತಾರೆ ಖಚಿತಪಡಿಸಲು ನಿರಾಕರಿಸಿದ್ದಾರೆ. ಆದರೆ ಇಂಥ ಪ್ರತಿಯೊಂದು ಘಟನೆ ಯನ್ನೂ ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದಿದ್ದಾರೆ.
ಸಿಎಐ ನಿರ್ದೇಶಕ ಭಾರತಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಭಾರತದ ಭದ್ರತಾ ಸಲಹೆಗಾರ ಅಜಿತ್ ದೊವಲ್ ಅವರೊಂದಿಗೆ ಅಪ್ಘಾನಿಸ್ತಾನದ ವಿಷಯ ಕುರಿತಂತೆ ತೀವ್ರ ಸಮಾಲೋಚನೆ ನಡೆಸಿದ್ದರು.
ಅಮೆರಿಕಾದ ರಾಜತಾಂತ್ರಿ ಅಧಿಕಾರಿಗಳಿಗೆ ಮತ್ತು ಗುಪ್ತಚರರಿಗರ ಈ ವಿಚಿತ್ರ ಕಾಯಿಲೆ ಕಾಣಿಸಿಕೊಳ್ಳುತಿದೆ. ಭಾರಿ ಶಬ್ಧ ಕೇಳಿಸುವುದು, ತಲೆ ಬಿರಿಯುವಂತೆ ನೋಯುವುದು, ತಲೆಯೊಲಗೆ ಕುಟ್ಟಿದಂತೆ ಆಗುವುದು ಮುಂತದವು ಈ ಸಿಂಡ್ರೋಮ್ನ ಲಕ್ಷಣಗಳು. ಭಾರಿ ಶಬ್ಧ ಕೇಳಿಸಿದವರು ಎರಡೂ ಕಿವಿಗಳನ್ನೂ ಮುಚ್ಚಿಕೊಂಡರೂ ಶಬ್ಧ ನಿಲ್ಲುವುದಿಲ್ಲ.
ಕ್ಯೂಬಾದಲ್ಲಿ ಸಿಐಎ ಅಧಿಕಾರಿಗೆ 2016ರಲ್ಲಿ ಮೊದಲ ಬಾರಿಗೆ ಹವಾನಾ ಸಿಂಡ್ರೋಮ್ ಕಾಣಿಸಿಕೊಂಡಿತ್ತು. ನಂತರ ಸುಮಾರು 26 ಜನ ಅಧಿಕಾರಿಗಳು ಮತ್ತು ಅದರ ಕುಂಟುAಬದವರನ್ನು ಅನೇಕ ಸಿಐಎ ಅಧಿಕಾರಿಗಳು ಮತ್ತು ಕಾಡತೊಡಗಿದೆ. ಏಕೆ ಹೀಗಾಗುತ್ತಿದೆ ಎನ್ನುವುದು ವೈದ್ಯರಿಗೂ ತಿಳಿದುಬರುತ್ತಿಲ್ಲ.
Leave a Comment