ಹರಿಹರ : ತಾಲೂಕಿನ ಬೆಳ್ಳೊಡಿ ಗ್ರಾಮದಲ್ಲಿ ಅಂಗನವಾಡಿ ಮಕ್ಕಳಿಗೆ ವಿತರಿಸಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ ಎನ್ನಲಾಗಿದ್ದು, ಗ್ರಾಮಸ್ಥರು ಆತಂಕಗೊAಡಿದ್ದಾರೆ.
ಕೆಲ ಪೋಷಕರು ಅಂಗನವಾಡಿಯಲ್ಲಿ ಮಕ್ಕಳಿಗೆ ವಿತರಿಸಿದ ಅಕ್ಕಿಯನ್ನು ಮನೆಯಲ್ಲಿ ಬೇಯಿಸಿದಾಗ ಸಂಪೂರ್ಣ ಪ್ಲಾಸ್ಟಿಕ್ ಆಗಿರುವ ಅಂಶ ಬೆಳಕಿಗೆ ಬಂದಿದೆ. ಈ ಕುರಿತು ಗ್ರಾಮಸ್ಥರು ಅಂಗನವಾಡಿ ವಿರುದ್ಧ ದೂರಿದ್ದಾರೆ.
ಗ್ರಾಮಸ್ಥರು ಚರ್ಚೆ ನಡೆಸಿ ಅಂಗನವಾಡಿಯಿAದ ವಿತರಿಸುವ ಅಕ್ಕಿಯನ್ನು ಬಳಸಬಾರದೆಂದು ಡಂಗೂರ ಸಾರುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
ಇದೇ ರೀತಿಯ ಅಕ್ಕಿ ಮತ್ತು ವಿಷಪೂರಿತ ಶೇಂಗಾ ಕಾಳು ಪೂರೈಕೆಯಾಗಿರುವ ಬಗ್ಗೆ ಮಲೇಬೆನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಪ್ರಾಸ್ರಾಪಿಸಿ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಪ್ರಸಂಗವೂ ಬುಧುವಾರ ನಡೆದಿದೆ. ಈ ಬಗ್ಗೆ ಗ್ರಾ.ಪಂ ವತಿಯಿಂದ ಆಹಾರ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ.
Leave a Comment