ಕಾರವಾರ : ಯುವಜನರಿಗೆ ಮಾಹಿತಿಯನ್ನು ನೀಡಲು 155-265 ಎಂಬ ವಿಶಿಷ್ಟ ಸಂಖ್ಯೆಯನ್ನು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು ಯುವ ಸಬಲೀಕರನ ಮತ್ತು ಕ್ರೀಡಾ ಇಲಾಖೆಯಿಂದ ಯುವಸಹಾಯವಾಣಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.
ಯುವಜನರಿಗೆ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಸಕಾಲದಲ್ಲಿ ಒದಗಿಸುವುದು. ಸರ್ಕಾರ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬAಧಿಸಿದAತೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆಯಲು ಅಪಾಯಕಾರಿ ಮತ್ತು ಮಾನಸಿಕ ಒತ್ತಡದ ಸಂದರ್ಭಗಳಲ್ಲಿರುವ ಯುವಜನರಿಗೆ ಸ್ಥೆರ್ಯಒದಗಿಸಲು. ಆಪ್ತ ಸಮಾಲೋಚನೆ ಸಹಾಯ ಹಾಗೂ ಸಂದರ್ಭೋಚಿತವಾದ ಅಗತ್ಯ ಕೌಶಲ್ಯ ಮತ್ತು ತರಬೇತಿಗಳ ಮಾಹಿತಿ ಪಡೆಯಲು ಮತ್ತು ಒದಗಿಸಲು ಈ ಯುವ ಸಹಾಯವಾಣಿ ಸಹಯಕವಾಗಿದೆ.
ಸಹಾಯಕವಾಣಿ ಮೂಲಕ ಖಾಸಗಿ ಕ್ಷೇತ್ರಗಳಲ್ಲಿ ಅಭ್ಯವಿರುವ ಉದ್ಯೋಗಾವಕಾಶಗಳಿಗೆ ಅಗತ್ಯ ಕೌಶಲ್ಯಗಳ ಬಗ್ಗೆ ಮಾಹಿತಿಯನ್ನು ಯುವಜನರಿಗೆ ಒದಗಿಸಲು ಮತ್ತು ಸರ್ಕಾರದ ಕೌಶಲ್ಯಾಭಿವೃದ್ಧಿ ಕಾರ್ಯಾಕ್ರಮಗಳ ಸದುಪಯೋಗ ಪಡೆಯುವಂತೆ ಪ್ರೋತ್ಸಾಹಿಸಲು ಉದ್ದೇಶಿಸಲಾಗಿರುತ್ತದೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment