ಭಟ್ಕಳ: ವರದಕ್ಷಿಣೆ ಕಿರುಕುಳ ನೀಡಿದ ವ್ಯಕ್ತಿಯೊಬ್ಬರಿಗೆ ನ್ಯಾಯಾಲಯ 6 ತಿಂಗಳು ಶಿಕ್ಷೆ ಹಾಗೂ 5 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಹೊಸನಗರದ ಮೊಹಮ್ಮದ್ ಶೌಕತ್ ಅಲಿ ಹಾಗೂ ಬದ್ರಿಯಾ ಕಾಲೋನಿಯ ಬಿಬ ಖತೀಜಾ ಅವರ ಮದುವೆಯು 1996ರಲ್ಲಿ ನಡೆದಿತ್ತು.
ಪತಿ ಮಹಮ್ಮದ್ ಶೌಕತ್ ಅಲಿ ಅವರು ಪತ್ನಿ ಬಿಬಿ ಖತೀಜಾರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದರ ಬಗ್ಗೆ ಸೆಕ್ಷನ್ 498(ಎ) ಅಡಿಯಲ್ಲಿ ಭಟ್ಕಳ ನ್ಯಾಯಾಲಯದಲ್ಲಿ ಪತ್ನಿ ಬಿಬಿ ಖತೀಜಾ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಸಿಎಲ್ ನ್ಯಾಯಾಧೀಶ ಫವಾಜ್ ಪಿ.ಎ. ಆರೋಪಿತ ಮೊಹಮ್ಮದ್ ನೌಕತ್ ಅಲಿಗೆ 6 ತಿಂಗಳ ಸಜೆ, 2 10 ಸಾವಿರ ದಂಡ ವಿಧಿಸಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ವಿವೇಕ ಆರ್. ನಾಯ್ಕ ವಾದಿಸಿದ್ದರು.
Leave a Comment