ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್ಸಿ) ಸೆಲೆಕ್ಷನ್ ಪೋಸ್ಟ್ (ಫೇಸ್-9) ಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳನ್ನು ಕೇಂದ್ರ ಸರ್ಕಾರದ ಅಧೀನದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಒಟ್ಟು ಹುದ್ದೆಗಳು:3261
ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಪಿಯುಸಿ/ ತತ್ಸಮಾನ, ಪದವಿ, ಸ್ನಾತಕೋತ್ತರ ಪದವಿಯನ್ನು ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪಾಸ್ ಮಾಡಿರಬೇಕು.
ಹುದ್ದೆಗಳ ಹೆಸರು;
- ಜೂನಿಯರ್ ಸೀಡ್ ಅನಾಲಿಸ್ಟ್
- ಗರ್ಲ್ಸ್ ಕೆಡೆಟ್ ಇನ್ಸ್ಟ್ರಕ್ಟರ್
- ಮೆಕ್ಯಾನಿಕಲ್ ವಿಭಾಗ ಚಾರ್ಜ್ಮನ್
- ಸೈಂಟಿಫಿಕ್ ಅಸಿಸ್ಟಂಟ್
- ಅಕೌಂಟಂಟ್
- ಹೆಡ್ ಕ್ಲರ್ಕ್
- ರಿಹ್ಯಾಬಿಲಿಟೇಶನ್ ಕೌನ್ಸೆಲರ್
- ಸ್ಟಾಫ್ ಕಾರ್ ಡ್ರೈವರ್
- ಟೆಕ್ನಿಕಲ್ ಸೂಪರಿಂಟೆಂಡಂಟ್
- ಕಂಸರ್ವೇಶನ್ ಅಸಿಸ್ಟಂಟ್
- ಟೆಕ್ನಿಕಲ್ ಅಸಿಸ್ಟಂಟ್
- ರಿಸರ್ಚ್ ಇನ್ವೆಸ್ಟಿಗೇಟರ್
- ಜೂನಿಯರ್ ಕಂಪ್ಯೂಟರ್ ಆಪರೇಟರ್
- ಸಬ್ ಎಡಿಟರ್ (ಹಿಂದಿ)
- ಸಬ್ ಎಡಿಟರ್ (ಇಂಗ್ಲಿಷ್)
- ಮಲ್ಟಿಟಾಸ್ಕಿಂಗ್ ಸ್ಟಾಫ್
- ಸೀನಿಯರ್ ಸೈಂಟಿಫಿಕ್ ಅಸಿಸ್ಟಂಟ್ (ಬಯೋಲಜಿ)
ಹೀಗೆ ಇನ್ನೂ ಹಲವು ಹುದ್ದೆಗಳು ಸೇರಿ ಒಟ್ಟು 3261 ಸೆಲೆಕ್ಷನ್ ಪೋಸ್ಟ್ಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಯಾವ್ಯಾವ ಹುದ್ದೆಗಳು ಎಷ್ಟು ಎಂಬ ಮಾಹಿತಿಗೆ ಕೆಳಗೆ ನೀಡಲಾದ ನೋಟಿಫಿಕೇಶನ್ನಲ್ಲಿ ಚೆಕ್ ಮಾಡಬಹುದು.
ಅರ್ಜಿ ಸಲ್ಲಿಸಲು ರೂ.100 ಶುಲ್ಕ ಪಾವತಿಸಬೇಕು. ಮಹಿಳಾ / ಎಸ್ಸಿ / ಎಸ್ಟಿ / PWd / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಶುಲ್ಕವನ್ನು ಆನ್ಲೈನ್ ಮೂಲಕ ಮತ್ತು ಆಫ್ಲೈನ್ ಚಲನ್ ಮೂಲಕ ಸಹ ಪಾವತಿ ಮಾಡಬಹುದು.
ಪ್ರಮುಖ ದಿನಾಂಕಗಳು:
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 24-09-2021
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 25-10-2021 ರ ರಾತ್ರಿ 23-30 ಗಂಟೆವರೆಗೆ.
ಶುಲ್ಕ ಪಾವತಿಸಲು ಕೊನೆ ದಿನಾಂಕ : 28-10-2021 ರ ರಾತ್ರಿ 23-30 ಗಂಟೆವರೆಗೆ.
ಆಫ್ಲೈನ್ ಚಲನ್ ಜೆನೆರೇಟ್ ಮಾಡಲು ಕೊನೆ ದಿನಾಂಕ : 28-10-2021 ರ ರಾತ್ರಿ 23-30 ಗಂಟೆವರೆಗೆ.
ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆ ದಿನಾಂಕ: 01-11-2021
ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ : ಜನವರಿ / ಫೆಬ್ರುವರಿ 2022
job info; Join our whatsapp group
web site; https://ssc.nic.in/
ಅರ್ಜಿ ಸಲ್ಲಿಸಲು / apply link ; https://ssc.nic.in/Registration/Home
interested candidates can read the full notification before apply online
notification ; https://ssc.nic.in/SSCFileServer/PortalManagement/UploadedFiles/notice_rhq_24092021.pdf
Leave a Comment