ಬೀಜಿಂಗ್ : ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಕಲ್ಲಿದ್ದಲು ಗಣಿಗಳ ಕಾಮಗಾರಿ ನಡೆಸುವುದಿಲ್ಲ. ಎಂದು ಷಿ ಜಿನ್ಪಿಂಗ್ ಘೋಷಿಸಿದೆ ಬೆನ್ನಲ್ಲೇ ಚೀನಾದಲ್ಲಿ ಹಿಂದೆAದೂ ಕಾಣದಂತಹ ವಿದ್ಯತ್ ಕಡಿತ ಉಂಟಾಗಿದೆ. ಲಕ್ಷಾಂತರ ಮನೆಗಳು ಕಗ್ಗತ್ತಲಿಗೆ ಬಿದ್ದಿವೆ.
ಅನೇಕ ಫ್ಯಕ್ಟರಿಗಳ ಕೆಲಸ ಸ್ಥಗಿತಗೊಂಡಿದೆ. ಕಲ್ಲಿದ್ದಲು ಕೊರತೆ ಹಾಗೂ ಮಾಲಿನ್ಯ ನಿಯಮಗಳನ್ನು ಬಿಗಿ ಮಡಿರಯವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಟ್ರಾಫಿಕ್ ಸಿಗ್ನಲ್ಗಳು ಸ್ಥಗಿತಗೊಂಡಿದ್ದು, ಕೆಲವೊಂದು ಪ್ರದೇಶಗಳಲ್ಲಿ 3ಜಿ ಮೊಬೈಲ್ಗಳು ಸ್ಥಗಿತಗೊಂಡಿವೆ. ಇದು ಸಾರ್ವಜ ನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲಿಂಗ್ ಲಿಯೊನಿಂಗ್ ಮತ್ತು ಹೀಲೊಂಗ್ಜಿಯಾAಗ್ ಪ್ರಾಂತ್ಯಗಳಲ್ಲಿ ಉಂಟಾಗಿರುವ ವಿದ್ಯತ್ ಕಡಿತ ಅನಿರೀಕ್ಷಿತ ಮತ್ತು ಹಿಂದೆAದೂ ಈ ರೀತಿ ಆಗಿರಲಿಲ್ಲ ಎಂದು ಕಮ್ಯನಿಸ್ಟ್ ಪಾರ್ಟಿಯ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಆಪಲ್ ಪೂರಕ ಕಂಪನಿ ಯೂನಿಮಿಕ್ರಾನ್ ಟೆಕ್ನಾಲಜಿ ಇತ್ಪಾದನೆಯನ್ನು ನಿಲ್ಲಿಸುವಂತೆ ತನ್ನ ಎರಡು ಘಟಕಗಳಿಗೆ ಸೂಚಿಸಿದೆ. ಅದೇ ರೀತಿ ಟೆಸ್ಲಾ ಕಂಪನಿಯೂ ಈ ವಾರ ಉತ್ಪಾದನೆ ನಿಲ್ಲಿಸುವಂತೆ ಸೂಚಿಸಿದೆ.
ಈ ಹಿನ್ನಲೆಯಲ್ಲಿ ಚೀನಾದ ಅಂದಾಜು ಜಿಡಿಪಿಯನ್ನು ಶೇ.8.2 ರಿಂದ ಶೇ.7.8 ಕ್ಕೆ ಇಳಿಸಲಾಗಿದೆ. ಚೀನಾದ ಕೈಗಾರಿಕೆಗಳು ಶೇ.60ರಷ್ಟು ಕಲ್ಲಿದ್ದಲು ಮೇಲೆಯೇ ನಿಂತಿದೆ.
ಡ್ರಾಗ್ಯಾನ
Leave a Comment