ಕುಮಟಾ : ನಾವಿಲ್ಲಿ ದನ ಕಾಯಲು ಬಂದಿದ್ದೇವಾ ಸಾರ್ವಜನಿಕರ ಕೆಲಸ ಆಗುವವರೆಗೂ ಕಚೇರಿಯಲ್ಲಿಯೇ ಕುಳಿತುಕೊಳ್ಳುತ್ತೆನೆ ಎಂದು ಹೆಗಡೆ ಪಿಡಿಒ ಅವರನ್ನು ಶಾಸಕ ದಿನಕರ ಶೆಟ್ಟಿ ತರಾಟೆಗೆ ತೆಗೆದುಕೊಂಡರು.
ಅವರು ಗುರುವಾರ ಕುಮಟಾ ಪಟ್ಟಣದ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರದ ಸಮಯದಲ್ಲಿ ಗ್ರಾಪಂ ಅಭಿವೃಧ್ಧಿ ಅಧಿಕಾರಿ ಶಿವಾನಂದ ಜೋಶಿ ಅವರನ್ನು ತರಾಟೆಗೆ ತೆಗೆದುಕೊಂಡು, ಹೆಗಡೆ ಗ್ರಾಪಂ ವ್ಯಾಪ್ತಿಯಲ್ಲಿ 15 ಕ್ಕೂ ಅಧಿಕ ಇಸ್ವತ್ತು ಪ್ರಕರಣಗಳನ್ನು ವಿಲೇಮಾರಿ ಮಡದೇ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದೀರಿ. ಪಂಚಾಯತದಲ್ಲಿ ಸಾರ್ವಜನಿಕರ ಕೆಲಸವಾಗುತ್ತಿಲ್ಲ. ಎಂದು ಹಲವರು ದೂರು ನೀಡಿದ್ದಾರೆ.

ಪೂರ್ಣ ಪ್ರಮಾಣದಲ್ಲಿ ದಾಖಲೆ ಪತ್ರಗಳನ್ನು ನೀಡಿದರೂ ಬಕಿ ಉಳಸಿಕೊಂಡಿರುವುದು ಯಾವ ಕಾರಣಕ್ಕೆ ಈಗಾಗಲೇ ಸೈಟ್ನಲ್ಲಿ ಅಪ್ಲೋಡ್ ಮಾಡಿ ಪ್ರಕರಣವನ್ನು ಇತ್ಯರ್ಥಗೊಳಿಸಿ ಎಂದು ಸೂಚನೆ ನೀಡಿದರು.
ಗ್ರಾಪಂ ಕಚೇರಿಗೆ ತೆರಳಿ. ಅಪ್ಲೋಡ್ ಮಾಡುತ್ತೆನೆ. ಎಂದು ಪಿಡಿಒ ತಿಳಿಸಿದಾಗ ಸಿಟ್ಟಾದ ಶಾಸಕರು, ತಾಪಂ ಕಚೇರಿಯಲ್ಲಿಯೇ ಕುಳಿತು ಅಪ್ಲೋಡ್ ಮಾಡಿ, ನಾನು ಉಟಕ್ಕೂ ತೆರಳುವುದಿಲ್ಲ. ಅವರಿಗೆ ಇ ಸ್ವತ್ತು ಪ್ರಮಾಣ ಪತ್ರ ವಿತರಿಸಿಯೇ ತೆರಳುತ್ತೇನೆ ಎಂದು ಹೇಳಿದಾಗ, ಕರ್ಕಿ ಪಿಡಿಒ ಕಿರಣ ಹಾಗೂ ದೇವಗಿರಿ ಪಿಡಿಒ ವನಯಕುಮಾರ, ಪೂರ್ಣ ದಾಖಲೆ ಪತ್ರಗಳು ಇರುವ ಪ್ರಕರಣಗಳನ್ನು ನಾವು ಅಪ್ಲೋಡ್ ಮಾಡಿಸುತ್ತವೆ. ಎಂದು ಶಾಸಕರನ್ನು ಸಮಾಧಾನಪಡಿಸಿದರು.
ಹಿರಿಯ ಅಧಿಕಾರಿಯಾಗಿ ನಾನು ಅವರ ಮೇಲೆ ಅಪಾದನೆ ಮಡುವುದು ಸರಿಯಲ್ಲ. ಹೆಗಡೆ ಪಿಡಿಒ ಮೇಲೆ ಹಲವಾರು ದೂರು ಬಂದಿತ್ತು. ಅವರಿಗೆ ಆಗಲೇ ಎಚ್ಚರಿಕೆ ನೀಡಲಾಗಿತ್ತು. ಆದರೂ ಈ ರೀತಿ ಮಾಡಿರುವುದು ಬೇಸರ ತಂದಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಟಿ. ನಯ್ಕ ಅಸಮಾಧಾನ ಹೊರ ಹಾಕಿದರು.
ಸಾರ್ವಜನಿಕರ ಕೆಲಸವನ್ನು ಶೀಘ್ರವಾಗಿ ಮಾಡಬೇಕು. ವಿನಕರಣ ಅವರಿಗೆ ತೊಂದರೆ ನೀಡಬಾರದು. ಒಂದು ವೇಳೆ ಕಿರಿಕಿರಿ ಮಾಡುವುದು ನನ್ನ ಗಮನಕ್ಕೆ ಬಂದರೆ ಅಂತಹ ಅಧಿಕಾರಿ ಮೇಲೆ ಯವುದೇ ಮುಲಾಜಿಲ್ಲದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಶಾಂತ ನಯ್ಕ. ಹೊಲನಗದ್ದೆ ಗ್ರಾಪಂ ಸದಸ್ಯೆ ಅನುರಾಧಾ ಬಟ್ಟ ಸೇರಿದಂತೆ ಮತ್ತಿತರರು ಇದ್ದರು.
Leave a Comment