ಹೊನ್ನಾವರ : ಸರಿಯಾದ ಬಟ್ಟೆ ಧರಿಸದೇ ದೇಶ ಸುತ್ತಿ, ಜಗತ್ತಿಗೆ ಶಾಂತಿ ಸಂದೇಶ ಸಾರಿದ ರಾಷ್ರಪಿತ ಮಹಾತ್ಮಾ ಗಾಂಧಿ ಮತ್ತು ಕೇವಲ ಹದಿನೆಂಟು ತಿಂಗಳುಗಳ ಕಾಲ ಭಾರತ ದೇಶವನ್ನು ಪ್ರಧಾನಿಯಾಗಿ ಪ್ರಾಮಾಣಿಕತೆಯಿಂದ, ದಕ್ಷ ಆಡಳಿತ ನೀಡಿ ಮುನ್ನಡೆಸಿದÀ ಮಾಜಿ ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರೀಯವರು ರಾಷ್ಟ್ರ ಮತ್ತು ಜಗತ್ತು ಕಂಡ ಶ್ರೇಷ್ಠ ಮಾನವತಾವಾದಿಗಳಾಗಿದ್ದು, ಅವರ ಸರಳ ಬದುಕು ಇಂದಿನ ಯುವಕರಿಗೆ ಆದರ್ಶ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್ ತೆಂಗೇರಿ ಅಭಿಪ್ರಾಯ ಪಟ್ಟರು.
ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಸಮಿತಿ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ ಮಹಾತ್ಮಾ ಗಾಂಧಿಜೀಯವರ 152 ನೇ ಜಯಂತಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರ 117ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ದಿನವನ್ನು ಕಾಂಗ್ರೆಸ್ ಪಕ್ಷ ದೇಶಾದ್ಯಂತ ಕಿಸಾನ್ ಮಜದೂರ್ ಬಚಾವ್ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು, ಈ ತಿಂಗಳಿನಾದ್ಯಂತದವರೆಗೂ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ, ಮಹಾತ್ಮಾ ಗಾಂಧೀಜಿಯವರ ನೆನಪಿಗಾಗಿ “ಮಹಾತ್ನಾ ಗಾಂಧಿ ಗ್ರಾಮ ಸ್ವರಾಜ್ಯ” ಹೆಸರಿನಲ್ಲಿ ಕಾಂಗ್ರೆಸ್ ಪಕ್ಷವು ಪ್ರತಿ ಪಂಚಾಯತ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಮಹಾತ್ಮಾ ಗಾಂಧಿಜೀಯವರು ಬ್ರಿಟಿಷರ ವಿರುದ್ಧ ಹೋರಾಡಿ ದೇಶವನ್ನು ಅವರ ಕಪಿ ಮುಷ್ಠಿಯಿಂದ ಮುಕ್ತ ಮಾಡಿದರು. ಗಾಂಧೀಜಿ ನೇತ್ರತ್ವದಲ್ಲಿ ನಡೆದ ಅಸಹಕಾರ ಚಳುವಳಿ, ಚಲೇಚಾವ್ ಚಳುವಳಿ, ಉಪ್ಪಿನ ಸತ್ಯಾಗ್ರಹ ಹೀಗೆ ಅನೇಕ ಚಳುವಳಿ ನಡೆಸಿ ಜೈಲುವಾಸ ಅನುಭವಿಸಿದ ಶಾಂತಿ ಧೂತ ನಮ್ಮ ಮಹಾತ್ಮಾ ಗಾಂಧಿ ಎಂದರು. ಆದರೆ ದೇಶದ ಐಕ್ಯತೆಗಾಗಿ ಹೋರಾಡಿದ ಮಹಾತ್ಮಾ ಗಾಂಧಿಜೀಯನ್ನು ಕೊಂದವರು ಇಂದು ವಿಜೃಂಭಿಸುತ್ತಿರುವುದು ದೇಶದ ದುರಂತ ಎಂದು ಜಗದೀಪ ತೆಂಗೇರಿ ನುಡಿದರು.
ಹಾಗೇ ಲಾಲ್ಬಹದ್ದೂರ್ ಶಾಸ್ತ್ರೀಯವರು ಕೂಡ ಎಂದು ಅಧಿಕಾರಕ್ಕಾಗಿ ಆಸೆ ಪಟ್ಟಿರಲಿಲ್ಲ. ದೇಶಕ್ಕಾಗಿ ತನು ಮನ ಧನವನ್ನು ಅರ್ಪಿಸಿದ್ದರು. ತಂದೆ-ತಾಯಿ ಹೇಳಿದ ನೀತಿ ಪಾಠಗಳನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದ ವಾಮನ ಸ್ವರೂಪಿ ನಮ್ಮ ಲಾಲ್ಬಹದ್ದೂರ್ ಶಾಸ್ತ್ರೀ ಎಂದು ತೆಂಗೇರಿ ಗುಣಗಾನ ಮಾಡಿದರು. ಶಾಸ್ತ್ರೀಯವರ “ಜೈ ಜವಾನ, ಜೈ ಕಿಸಾನ್” ಅನ್ನೊ ಸಂದೇಶ ಜನಪ್ರಿಯವಾಗಿತ್ತು. ಆದರೆ ಇಂದಿನ ಕೇಂದ್ರ, ರಾಜ್ಯ ಸರಕಾರಗಳು ಕೃಷಿ ವಿರೋಧಿ ಕರಾಳ ಮಸೂದೆಯನ್ನು ಜಾರಿಗೆ ತಂದಿರುವುದು ದೇಶದ ದುರಂತ ಎಂದರು.
ಹೊನ್ನಾವರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ ಮಾತನಾಡಿ ಮಧ್ಯರಾತ್ರಿ ಮಹಿಳೆಯರು ಭಯ ಮುಕ್ತರಾಗಿ ತಿರುಗಾಡುವ ದಿನ ಬಂದಾಗಲೇ ನಿಜವಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಂತೆ ಎಂದು ಮಹಾತ್ಮಾ ಗಾಂಧಿ ನುಡಿದಿದ್ದರು ಎಂದರು.
ಸಭೆ ಆರಂಭಕ್ಕೂ ಮುನ್ನ ಪಕ್ಷದ ಕಾರ್ಯಕರ್ತರು ಈ ಎರಡು ಮಹಾನ್ ಚೇತನಕ್ಕೆ ಮೌನಾಚರಣೆ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿದರು ನಂತರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನೆರೆದ ಕಾರ್ಯಕರ್ತರು ಗೌರವ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಜಿಲ್ಲಾ ಕಾಂಗ್ರೇಸ್ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಕಾಂಗೇಸ್ ಸೇವಾದಳದÀ ಕೃಷ್ಣ ಮಾರಿಮನೆ, ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಝಕ್ರಿಯ್ಯಾ ಶೇಖ್, ಶಕ್ತಿ ಸಂಚಾಲಕ ಬಾಲಚಂದ್ರ ನಾಯ್ಕ, ಮಹೇ± ನಾಯ್ಕ, ಮಂಜುನಾಥ ಖಾರ್ವಿ, ಮಾದೇವ ನಾಯ್ಕ, ಕರ್ಕಿ, ಬ್ರಾಜಿಲ್ ಪಿಂಟೊ, ಚಂದ್ರಶೇಖರ ಚಾರೋಡಿ, ಜೋಸೆಪ್ ಡಿಸೋಜಾ, ಕೃಷ್ಣ ಹರಿಜನ, ಮನ್ಸೂರ್ ಶೇಖ್, ಹನೀಫ್ ಶೇಖ್, ಹಿಂದುಳಿದ ವರ್ಗ ವಿಭಾಗದ ಕಾರ್ಯದರ್ಶಿ ಸುರೇಶ ಮೇಸ್ತ, ಮಹಮ್ಮ ಅಲಿ, ಮದನ ರಾಜ್, ಮಹೇಶ ನಾಯ್ಕ ಇನ್ನು ಮುಂತಾದವರು ಉಪಸ್ಥಿತರಿದ್ದರು.
Leave a Comment