ಮೈಸೂರು : ಕೋವಿಡ್ ಮೂರನೇ ಅಲೆಯ ಭೀತಿಯ ನಡುವೆಯೂ ನಡೆಯುತ್ತಿರುವ ದಸರಾ ಉತ್ಸವದ ಪ್ರಯುಕ್ತ ಅರಮನೆಯಲ್ಲಿ ನಡೆಯಲಿರುವ ಖಾಸಗಿ ಶರನ್ನವರಾತ್ರಿ ಪೂಜಾ ಕೈಂಕರ್ಯದಲ್ಲಿ ಕುಟುಂಬ ಸದಸ್ಯರು, ಸಾರ್ವಜನಿಕರು ಹಾಗೂ ಮಾಧ್ಯಮದವರ ಭಗವಹಿಸುವಿಕೆಯನ್ನೂ ಸಹ ನಿಷೇಧಿಸಲಾಗಿದೆ.
ಈ ಕುತಂತೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರು ಪ್ರಕಟಣೆ ನೀಡಿದ್ದು, ಕೊರೊನಾ ಮೂರನೇ ಅಲೆಯ ದೃಷ್ಟಿಯಿಂದ ಮೈಸೂರು ಅರಮನೆ ಯಲ್ಲಿ ಈ ಸಾಲಿನ ಶರನ್ನವರಾತ್ರಿ ಪೂಜಾ ವಿಧಿಗಳನ್ನು ಕೇವಲ ಸಾಂಪ್ರದಾಯಕವಾಗಿ ನೆರವೇರಿಸಲಾಗುತ್ತದೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಈ ವೇಳೆ ಕುಂಟುಬ ಸದಸ್ಯರನ್ನು ಒಳಗೊಂಡAತೆ ಸಾರ್ವಜನಿಕರು ಹಾಗೂ ಮಾಧ್ಯಮದವರ ಭಾಗವಹಿಸುವಿಕೆಗೂ ಅವಕಾಶ ಇರುವುದುಲ್ಲ ಎಂದು ತಿಳಿಸಿದ್ದಾರೆ.
ಜೊತೆಗೆ, ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿದೆ. ಎಲ್ಲರ ಸಂಪೂರ್ಣ ಸಹಕಾರವನ್ನು ನರೀಕ್ಷಿಸುವುದಾಗಿ ಪ್ರಪಮೋದಾದೆವಿ ಮನವಿ ಮಾಡಿದ್ದಾರೆ.
ಇನ್ನು ಅಕ್ಟೋಬರ್ ಏಳರಂದು ಗುರುವಾರ ಚಾಂಮುಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಬಳಿ ದಸರಾ ಉದ್ಘಾಟನೆ ಯಾಗಲಿದ್ದು, ಅಂದಿನಿAದಲೇ ನಗರದ ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭಗೊಳ್ಳಲಿದೆ. ಇದೇ 15 ರ ಶುಕ್ರವಾರ ವಿಜಯದಶಮಿ ಮೆರವಣಿಗೆ ನಡೆಯಲಿದೆ.
Leave a Comment