ಕಾರವಾರ : ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸಮುದ್ರದ ಅಲೆಗೆ ಸಿಲುಕಿ ನೀರು ಪಾಲಾಗುತ್ತಿದ್ದ ಆರು ಮಕ್ಕಳನ್ನು ಸೋಮವಾರ ರಕ್ಷಿಸಲಾಗಿದೆ.
ಹುಬ್ಬಳಿಯಿಂದ ಶಫಿ ಎನ್ನುವವರ ಕುಟುಂಬದ 13 ಸದಸ್ಯರು ಪ್ರವಾಸಕ್ಕೆ ಬಂದಿದ್ದರು. ವಟರ್ ಸ್ಫೋರ್ಟ್ ಮುಗಿಸಿದ ಈ ಕುಂಟುಬದಲ್ಲಿ ಆರು ಮಕ್ಕಳು ಸಾಗರ ಮತ್ಸಾö್ಯಲಯದ ಹಿಂಭಾಗದ ಸಮುದ್ರದಲ್ಲಿ ಅಪಯಕಾರಿ ಸ್ಥಳದಲ್ಲಿ ಬೀಚ್ಗೆ ಇಳಿದು ಆಟವಾಡುತ್ತಿದ್ದ ಅಡತೊಡಗಿದ್ದರು.

ಈ ವೇಳೆ ವಟರ್ಸ್ ಸ್ಪೋರ್ಟ್ಸ್ ಸಿಬ್ಬಂದಿ ಪಲಕರಿಗೆ ಮಕ್ಕಳನ್ನು ನೀರಿನಲ್ಲಿ ಮುಂದೆ ಹೋಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು. ಆದರೂ ಮಕ್ಕಳು ಆಟ ಅಟುತ್ತ ಮುಂದೆ ಸಾಗಿದ್ದು, ಈ ವೇಳೆ ಸಮುದ್ರದಿಂದ ಬಂದೇ ಸಮನೆ ಬಂದ ಅಲೆ ಮಕ್ಕಳನ್ನು ಎಳೆದೊಯ್ದಿದೆ.

ಈ ಸಂದರ್ಭದಲ್ಲಿ ಮಕ್ಕಳ ಪಲಕರು ಕೂಗಿಕೊಂಡಿದ್ದು, ತಕ್ಷಣ ಕಡಲತೀರದಲ್ಲಿದ್ದ ಲೈಫ್ ಗಾರ್ಡ್ ಮತ್ತು ಪೊಲೀಸರು ರಕ್ಷಣಾ ಕಾರ್ಯ ನಡೆಸಿದ್ದಾರೆ. ಟೂರಿಸ್ಟ್ ಮಿತ್ರ ರಾಘವೆಂದ್ರ ನಾಯ್ಕ . ಲೈಫ್ ಗಾರ್ಡ್ ಕೇತನ್ ಸಾವಂತ್, ವೇವ್ಸ್ ಅಡ್ವೆಂಚರ್ಸ್ ಸಿಬ್ಬಂದಿ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ. ಸಮುದ್ರದ ಅಲೆಗೆ ಸಿಕ್ಕ ಒಂದು ಮಗುವಿನ ಸ್ಥಿತಿ ಗಂಭೀರವಗಿದ್ದು, ಮೆಡಿಕಲ್ ಕಲೇಜು ಆಸ್ಪತ್ರೆಗೆ ದಖಲಿಸಿ ಚಿಕಿತ್ಸೆ ನೀಡಲಾಗಿದೆ.
Leave a Comment