ಬೆಂಗಳೂರು : ಟಾಟಾ ಪೋಟರ್ಸ್ ಕಂಪನಿಯ ತನ್ನ ಸಬ್ ಕಾಂಪ್ಯಾಕ್ಟ್ ಎಸ್ಯುವಿ ಪಂಚ್ ಅನ್ನು ಸೋಮವಾರ ಅನಾವರಣಗೊಳಿಸಿದೆ. ಕಂಪನಿಯ ಜಾಲತಾಣ ಮತ್ತು ಮಾರಾಟ ಕೇಂದ್ರಗಳಲ್ಲಿ 21 ಸಾವಿರ ಪಾವತಿಸಿ ಈ ಕಾರು ಬಿಕ್ ಮಾಡಬಹುದು. ಬುಕಿಂಗ್ ಸೋಮವಾರದಿಂದಲೇ ಆರಂಭ ಆಗಿದೆ.
ಇದೇ ತಿಂಗಳ 20 ರಂದು ಕಾರನ್ನು ಮಾರಿಕಟ್ಟೆ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಲಾಗಿದೆ ಎಂದು ಕಂಪನಿಯ ಉಪಾಧ್ಯಕ್ಷ ಆನಂದ್ ಕುಲಕರ್ಣಿ ಅವರು ತಿಳಿಸಿದ್ದಾರೆ.
1.2 ಲೀಟರ್ ಪೆಟ್ರೋಲ್ ಎಂಜಿನ್ ಮ್ಯಾನುಯಲ್ ಮತ್ತು ಆಟೊಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳಲ್ಲಿ ಲಭ್ಯವಿದೆ. ಗ್ರಾಹಕರ ಜೀವನಶೈಲಿಯ ಅಗತ್ಯಗಳನ್ನು ಪೂರೈಸಲು ನಾಲ್ಕು ವಿಧಗಳಲ್ಲಿ ಈ ಕಾರು ಲಭ್ಯವಿದೆ ಎಂದು ಅವರು ಹೇಳಿದರು.
ಆಲ್ಫಾ (ಅಜೈಲ್ ಲೈಟ್ ಪ್ಲೆಕ್ಸಿಬಲ್ ಟಾಟಾ ಪಂಚ್ ಅಡ್ವಾನ್ಸ್÷್ಡ) ಆರ್ಕಿಟೆಕ್ಚರ್ನಿಂದ ಸಿದ್ಧ ಪಡಿಸಿರುವ ಕಂಪನಿಯ ಮೊದಲ ಸಬ್ ಕಂಪ್ಯಾಕ್ಟ್ ಎಸ್ಯುವಿ ಇದಾಗಿದೆ. ಮಾರುಕಟ್ಟೆಯ ಬೇಡಿಕೆಯನ್ನು ಆಧರಿಸಿ ಮುಂಬರುವ ಹಂತಗಳಲ್ಲಿ ಈ ಮಾದರಿಯನ್ನು ವಿದ್ಯತ್ ಜಾಲಿತ ಆವೃತ್ತಿಯಾಗಿ ಪರಿವರ್ತಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, 366 ಲೀಟರ್ ಬೂಟ್ ಸ್ಟೇಸ್, ಹರ್ಮಾನ್ ಇನ್ಫೊಟೇನ್ಮೆಂಟ್ ಸಿಸ್ಟಂ ಸಂಪೂರ್ಣ ಸ್ವಯಂಚಾಲಿತ ತಾಪಮಾನ ನಿಯಂತ್ರಣ ಸೇರಿದಂತೆ ಇನ್ನೂ ಹಲವು ವೈಶಷ್ಟö್ಯಗಳನ್ನು ಇದು ಒಳಗೊಂಡಿದೆ ಎಂದು ಕಂಪನಿಯು ತಿಳಿಸಿದೆ.
Leave a Comment