ಹೊನ್ನಾವರ : ತಾಲೂಕಿನ ಕಾಸರಕೋಡ ಇಕೋ ಬೀಚ್ ಸಮುದ್ರ ತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ಈರ್ವರು ಪ್ರವಾಸಿಗರನ್ನು ಇಲ್ಲಿಯ ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ವರೆದಿಯಾಗಿದೆ.

ಬಾಗಲಕೋಟೆಯಿಂದ ಆಗಮಿಸಿದ ಪ್ರವಾಸಿಗರ ತಂಡದ ಮಂಜುಳಾ ಬಿರಾದಾರ ಮತ್ತು ಲಕ್ಷಣ ಬಿರಾದಾರ ಸಮುದ್ರದಲ್ಲಿ ಕೊಚ್ಚಿ ಹೊಗುತ್ತಿದ್ದರು. ಕೂಡಲೇ ರಕ್ಷಣೆಗೆ ಧಾವಿಸಿದ ಲೈಫ್ ಗಾರ್ಡ್ಗಳಾದ ಯಶವಂತ ಮಾದೇವ ಹರಿಕಂತ್ರ. ವದೇಂದ್ರ ಬಾಬು ಅಂಬಿಗ, ಸುಬ್ರಾಯ ತಾಂಡೇಲ ಈರ್ವರನ್ನು ರಕ್ಷಣೆ ಮಾಡಿದ್ದಾರೆ.
ನಂತರ ಪ್ರಾಥಮಿಕ ಚಿಕಿತ್ಸೆ ನೀಡದ್ದು, ಅಪಾಯದಿಂದ ಪಾರಾಗಿದ್ದಾರೆ. ಇತ್ತಿಚೀನ ದಿನಗಳಲ್ಲಿಜಿಲ್ಲೆಯ ಕಡಲತೀರದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಪ್ರವಾಸಿಗರು ಸಮುದ್ರದಲ್ಲಿ ಈಜಾಡಲು ನಿಷೇಧಿಸಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
Leave a Comment