ಹೊನ್ನಾವರ: sಸರ್ಕಾರದ ವಿವಿಧ ಇಲಾಖೆಯ ಯೋಜನೆಗಳ ಮಾಹಿತಿ ಜನರಿಗೆ ತಲುಪುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ವಿಶೇಷ ಪ್ರಯತ್ನ ನಡೆಸಿ ಮಾಹಿತಿ ನೀಡುವಂತಹ ಕಾರ್ಯಕ್ಕೆ ಮುಂದಾಗಬೇಕು ಎಂದು ತಾಲೂಕ ಪಂಚಾಯತ ಆಡಳಿತಾಧಿಕಾರಿ ವಿನೋಧ ಅನ್ವೇಕರ್ ಸಲಹೆ ನೀಡಿದರು.
ತಾಲೂಕ ಪಂಚಾಯತಿ ಸಭಾಭವನದಲ್ಲಿ ಸಾಮನ್ಯಸಭೆಯಲ್ಲಿ ವಿವಿಧ ಇಲಾಖೆಯ ಚರ್ಚೆ ನಡೆಸಿ ಹಲವು ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಹೆಸ್ಕಾಂ ಇಲಾಖೆಯ ಚರ್ಚೆಯಲ್ಲಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಉತ್ತರಿಸಿದ ಅಧಿಕಾರಿಗಳು ಸಮಸ್ಯೆ ಬಂದಾಗ ಕೂಡಲೇ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ಸೋಲಾರ್ ಬಳಸಿ ಅದರಿಂದ ಹೆಸ್ಕಾಂಗೆ ಖರೀದಿಗೆ ಅವಕಾಶವಿದೆ.

ಈ ಬಗ್ಗೆ ನಮ್ಮ ಕಚೇರಿಗೆ ಬಂದರೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುತ್ತಿದ್ದೇವೆ. ಮನೆ ಹಾಗೂ ಸಭಾಭವನ ಧಾರ್ಮಿಕ ಸ್ಥಳದ ಮೇಲ್ಚಾವಣೆಯಲ್ಲಿ ಸೋಲಾರ್ ಅಳವಡಿಸುವ ಮೂಲಕ ಈ ಯೋಜನೆಯ ಸದುಪಯೋಗ ಪಡೆಯಬಹುದೆಂದು ಮಾಹಿತಿ ನೀಡಿದರು.
ಕಂದಾಯ ಇಲಾಖೆಯ ಚರ್ಚೆಯಲ್ಲಿ ಬಿಪಿಎಲ್ ಕಾರ್ಡದಾರರಿಗೆ ಕೆವೈಸಿ ನೊಂದಣೆ ಕಾರ್ಯ ಪ್ರಗತಿಯಲ್ಲಿದೆ. 889 ಹೊಸ ಪಡಿತರ ಕಾರ್ಡ ವಿತರಣೆಗೆ ಬಾಕಿ ಇದೆ. 452 ನಕಲಿ ಬಿಪಿಎಲ್ ಕಾರ್ಡ ಹೊಂದಿರುವವರನ್ನು ಪತ್ತೆ ಮಾಡಿ 1.29 ಸಾವಿರ ದಂಡ ವಸೂಲಿ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.



shri devaki krishna wash point, karki naka ,honavar contact; sachin mesta 9538529046,8310014860
ಶಾಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆಯ ಬಗ್ಗೆ ಕೈಗೊಳ್ಳಲಾಗುತ್ತಿರುವ ಕ್ರಮದ ಕುರಿತು ವಿವರಿಸಿ ಶಾಲಾ ಶಿಕ್ಷಕ ಅಥವಾ ಶಿಕ್ಷಕೇತರ ಸಿಬ್ಬಂದಿಗಳ ಮೂಲಕ ಅರ್ಜಿ ಸ್ವೀಕರಿಸಿ ತ್ವರಿತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಸಮಸ್ಯೆ ಇರುವ ಶಾಲಾ ಮುಖ್ಯಸ್ಥರು ಮಾಹಿತಿ ನೀಡಬಹುದು ಎಂದರು.
ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಬಂದರು, ಅಗ್ನಿಶಾಮಕ, ಸಮಾಜಕಲ್ಯಾಣ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ಪರಿಶೀಲನಾ ವರದಿ ಸಲ್ಲಿಸಿದರು.
ತಾಲೂಕ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment