ಈ-ಶ್ರಮ್ ಅಥವಾ (NDUW) National National Database for Unorganised Workers (ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್) ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು, ಮುಂಬರುವ ಯೋಜನೆಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಅನುಕೂಲವಾಗಲಿದೆ.

ಏನಿದು ಈ-ಶ್ರಮ್? ಎಲ್ಲಾ ಅಸಂಘಟಿತ ವಲಯದ ಕಾರ್ಮಿಕರು, ಅಂದರೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರೂ ಸೇರಿದಂತೆ, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಮನೆ ಕೆಲಸದಾವರು, ಕೃಷಿ ಕಾರ್ಮಿಕರು, ಅರ್ಚಕರು, ಅಡುಗೆ ಕೆಲಸದವರು ಹಾಗೂ ಇನ್ನೂ ಹಲವು ವರ್ಗದ ಕಾರ್ಮಿಕರನ್ನು ಒಳಗೊಂಡ ಅತಿದೊಡ್ಡ ರಾಷ್ಟ್ರೀಯ ಡೇಟಾಬೇಸ್ ಇದಾಗಿದೆ.
ಕೇಂದ್ರ ಸರ್ಕಾರ ಏಕೆ ಈ ಯೋಜನೆಯನ್ನು ಜಾರಿಗೆ ತಂದಿದೆ?
- ಎಲ್ಲಾ ಅಸಂಘಟಿತ ವಲಯದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ನಿರ್ಮಾಣ.
- ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನವನ್ನು ಸುಧಾರಣೆ ಮಾಡುವುದು ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಮೀಸಲಿರುವ ಸಾಮಾಜಿಕ ಭದ್ರತಾ ಯೋಜನೆಗಳನ್ನು ಏಕೀಕರಣಗೊಳಿಸುವುದು.
- ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವಾಲಯಗಳು/ ಇಲಾಖೆಗಳು/ ಮಂಡಳಿಗಳು/ ಏಜೆನ್ಸಿಗಳು/ ಸಂಸ್ಥೆಗಳಂತಹ ವಿವಿಧ ಪಾಲುದಾರರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವುದು ಹಾಗೂ ಅವರು ನಿರ್ವಹಿಸುತ್ತಿರುವ API ಗಳ ಮೂಲಕ ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಾರ್ಮಿಕರಿಗೆ ತಲುಪಿಸುವುದು.
- ವಲಸಿಗರು ಮತ್ತು ನಿರ್ಮಾಣ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಪ್ರಯೋಜನಗಳ ಪೋರ್ಟಬಿಲಿಟಿ.
- ಭವಿಷ್ಯದಲ್ಲಿ ಕೋವಿಡ್ -19 ನಂತಹ ಯಾವುದೇ ರಾಷ್ಟ್ರೀಯ ಬಿಕ್ಕಟ್ಟುಗಳನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಮಗ್ರ ಡೇಟಾಬೇಸ್ ಒದಗಿಸುವುದು.
ಈ-ಶ್ರಮ್ (NDUW) ಪೋರ್ಟಲ್‌ನಲ್ಲಿ ಯಾರು ನೋಂದಾಯಿಸಿಕೊಳ್ಳಬಹುದು?
ಯಾವುದೇ ಅಸಂಘಟಿತ ಕಾರ್ಮಿಕ:
- ವಯಸ್ಸು 16-59 ವರ್ಷಗಳ ನಡುವೆ ಇರಬೇಕು.
- EPFO/ESIC ಅಥವಾ NPS (ಸರ್ಕಾರಿ / ಅನುದಾನಿತ) ಸದಸ್ಯರಾಗಿರಬಾರದು.
ಅಸಂಘಟಿತ ಕಾರ್ಮಿಕರು ಯಾರು?
- ಇಎಸ್‌ಐಸಿ ಅಥವಾ ಇಪಿಎಫ್‌ಒ ಅಥವಾ ಸರ್ಕಾರಿ ಸದಸ್ಯರಲ್ಲದ ಸಂಘಟಿತ ವಲಯದ ಕಾರ್ಮಿಕ ಸೇರಿದಂತೆ ಅಸಂಘಟಿತ ವಲಯದ ಮನೆ ಕೆಲಸಗಾರ, ಸ್ವಯಂ ಉದ್ಯೋಗಿ ಅಥವಾ ಕೂಲಿ ಕೆಲಸಗಾರನಾಗಿರುವ ಯಾವುದೇ ಕಾರ್ಮಿಕ. ಉದ್ಯೋಗಿಯನ್ನು ಅಸಂಘಟಿತ ಕಾರ್ಮಿಕ ಎಂದು ಕರೆಯಲಾಗುತ್ತದೆ.
ನೋಂದಣಿಗೆ ಏನು ಬೇಕು?
- ಆಧಾರ್ ಸಂಖ್ಯೆ (ಓ ಟಿ ಪಿ ಮೂಲಕ ನೋಂದಾಯಿಸಾಲು / ಸ್ವಯಂ ನೋಂದಾಯಿಸಲು ಆಧಾರ್ ಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿರಬೇಕು.
- ಮೊಬೈಲ್ ಸಂಖ್ಯೆ
- ಬ್ಯಾಂಕ್ ಪಾಸ್ ಬುಕ್
ಈ-ಶ್ರಮ್ ಕಾರ್ಡ್ ಮಾಡಿಸಿಕೊಂಡವರಿಗೆ ವರ್ಷದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಉಚಿತವಾಗಿರುತ್ತದೆ.
- ಸ್ವಯಂ ನೋಂದಣಿಗಾಗಿ https://register.eshram.gov.in/#/user/self ಭೇಟಿನೀಡಿ.
Leave a Comment